ಚಾಮರಾಜನಗರ: ತಂಗಳು ಬಿರಿಯಾನಿ ಸೇವಿಸಿ ಕೂಲಿ ಕಾರ್ಮಿಕರು ಅಸ್ವಸ್ಥಗೊಂಡಿದ್ದು, 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಳ್ಳೇಗಾಲ ತಾಲೂಕು ಕುಣಗಳ್ಳಿ ಗ್ರಾಮದಲ್ಲಿ ಸೋಮವಾರ (ಜು.18) ಅರೇಪಾಳ್ಯ ಗ್ರಾಮದ ಸಂತೋಷ್ ಎಂಬುವವರು ಮಗನ ಹುಟ್ಟುಹಬ್ಬಕ್ಕೆ ಚಿಕನ್ ಬಿರಿಯಾನಿ ಮಾಡಿಸಿದ್ದರು. ಸ್ನೇಹಿತರು ಹಾಗೂ ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು ಎನ್ನಲಾಗಿದೆ. ಮಂಗಳವಾರ (ಜು.೧೯) ಸಂತೋಷ್ ಅವರ ಜಮೀನಿಗೆ ಕಬ್ಬು ಕಟಾವಿಗೆ ಎಂದು ಬಂದ ಕೂಲಿ ಕಾರ್ಮಿಕರಿಗೆ ಉಳಿದಿದ್ದ ತಂಗಳು ಬಿರಿಯಾನಿಯನ್ನು ನೀಡಿದ್ದರು ಎನ್ನಲಾಗಿದೆ. ತಿಂದವರೆಲ್ಲರಿಗೂ ಸಂಜೆಯಾಗುತ್ತಿದಂತೆ ವಾಂತಿ, ಭೇದಿ ಶುರುವಾಗಿದೆ. ಒಬ್ಬೊಬ್ಬರೇ ತೀವ್ರ ಅಸ್ವಸ್ಥರಾಗುತ್ತಾ ಬಂದಿದ್ದಾರೆ.
ಇದನ್ನೂ ಓದಿ | Fertilizer problems | ಚಾಮರಾಜನಗರದಲ್ಲಿ ರಸಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ ರೈತ ಅಸ್ವಸ್ಥ
ತೀವ್ರ ಅಸ್ವಸ್ಥಗೊಂಡ ಕೂಲಿ ಕಾರ್ಮಿಕರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಚಾರ ತಿಳಿದ ಶಾಸಕ ಎನ್.ಮಹೇಶ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಕೊಳ್ಳೆಗಾಲ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.