ಯಾದಗಿರಿ: ಮಳೆಯ ಅವಕೃಪೆಯಿಂದ (lack of rain) ಅನ್ನದಾತರು (Farmers) ಕಂಗಾಲಾಗಿದ್ದು, ತಮ್ಮ ಬೆಳೆ (Crop) ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ, ಇನ್ನು ಮಳೆ ನಿರೀಕ್ಷೆಯಿಂದ ಹತ್ತಿ ಬಿತ್ತನೆ ಮಾಡಿರುವ ರೈತರು, ಮಳೆಯ ಅಭಾವದಿಂದಾಗಿ ಬೆಳೆ ಬಾಡುತ್ತಿರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ.
ಕೆಲ ರೈತರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಲು ಹತ್ತಿ ಬೆಳೆಗೆ ಬಕೆಟ್ ಮೂಲಕ ನೀರು ತೆಗೆದುಕೊಂಡು ಬಂದು ಹತ್ತಿ ಸಸಿಗೆ ನೀರು ಹಾಕಿ ಬೆಳೆ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ: Lalbagh Tour : ಸಸ್ಯಕಾಶಿ ಲಾಲ್‌ಬಾಗ್‌ನೊಳಗೆ ಏನೇನಿದೆ? ಮರೆಯದೆ ನೋಡಿ…
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ತಾಂಡಾದ ರೈತರು ಹತ್ತಿ ಬೆಳೆಗೆ ಕುಟುಂಬ ಸಮೇತ ಪ್ರತಿ ದಿನ ಮೂರು ಬಾರಿ ನೀರು ಹಾಕಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ದೋರನಹಳ್ಳಿ ತಾಂಡಾದ ರೈತರಾದ ಸಂಗಪ್ಪ ಹಾಗೂ ಸರೀತಾ ಅವರು ಮಾತನಾಡಿ, ಮಳೆ ಬಂದಿಲ್ಲ ಹತ್ತಿ ಬೆಳೆ ಒಣಗುತ್ತಿದ್ದು ನಮಗೆ ಬಹಳ ಕಷ್ಟವಾಗಿದೆ. ಬೆಳೆಗೆ ತಂಬಿಗೆ ಮೂಲಕ ನೀರು ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇನ್ನು ಕೆಲ ರೈತರು ಟ್ಯಾಂಕರ್ ಮೂಲಕ ಹಾಗೂ ಸ್ಪ್ರಿಂಕ್ಲರ್ ಮೂಲಕ ತಮ್ಮ ಬೆಳೆಗಳಿಗೆ ನೀರು ಹಾಯಿಸಿ, ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಕೃಷಿ ಇಲಾಖೆಯು 4 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿತ್ತು. ಆದರೆ ಜಿಲ್ಲೆಯಲ್ಲಿ ಕೇವಲ 1 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಹೆಸರು ಎರಡುವರೆ ಸಾವಿರ ಹೆಕ್ಟೇರ್, ಹತ್ತಿ ಬೆಳೆಯು 80 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ.
ಇದನ್ನೂ ಓದಿ: Borewell Tragedy : ಕೊಳವೆ ಬಾವಿ ಮಣ್ಣು ಕುಸಿದು ಯುವಕ ದಾರುಣ ಸಾವು, ಇನ್ನಿಬ್ಬರಿಗೆ ಗಾಯ
ಮಳೆ ಕೈಕೊಟ್ಟ ಪರಿಣಾಮ ಅನ್ನದಾತರು ಈಗ ಮುಗಿಲತ್ತ ಮುಖ ಮಾಡಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಜನವರಿಯಿಂದ ಇಲ್ಲಿವರೆಗೆ 198 ಎಂಎಂ ಮಳೆಯಾಗಬೇಕಿತ್ತು ಆದರೆ 193 ಎಂ.ಎಂ. ಮಳೆಯಾಗಿದೆ. 4 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. 1 ಲಕ್ಷ್ಮ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.
-ಆಬೀದ್ ಎಸ್.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕ, ಯಾದಗಿರಿ