ಬೆಂಗಳೂರು: ವಿಜಯ ಕರ್ನಾಟಕ ಪತ್ರಿಕೆಯ ಜೂನಿಯರ್ ಅಸಿಸ್ಟೆಂಟ್ ಎಡಿಟರ್ ಮೇರಿ ಜೋಸೆಫ್ ಅವರು ಪ್ರತಿಷ್ಠಿತ ೧೨ನೇ ಆವೃತ್ತಿಯ ಲಾಡ್ಲಿ ಮೀಡಿಯಾ ಆಂಡ್ ಅಡ್ವರ್‌ಟೈಸಿಂಗ್ ಅವಾರ್ಡ್ ಫಾರ್ ಜೆಂಡರ್ ಸೆನ್ಸಿಟಿವ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೈದರಾಬಾದ್‌ನ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡಿದ್ದ “ಕರಿಯ ಹೆಣ್ಣು ಮಗಳ ಪ್ರೀತಿಯ ವಿಷಯದಲ್ಲಿ ಏಕಾಂಗಿಯೇ’ ಎಂಬ ಅಂಕಣ ಬರಹಕ್ಕೆ ಪ್ರಶಸ್ತಿ ಲಭಿಸಿದೆ. ಯುಎನ್ ಎಫ್‌ಪಿಎನ (ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ) ಡೆಪ್ಯುಟಿ ರೆಪ್ರೆಸೆಂಟೇಟಿವ್ ಶ್ರೀರಾಮ್ ಹರಿದಾಸ್ ಹಾಗೂ ಪಾಪ್ಯುಲೇಷನ್ ಫಸ್ಟ್‌ನ ನಿರ್ದೇಶಕಿ ಡಾ. ಎಲ್ ಎನ್ ಶಾರದಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀರಾಮ್ ಹರಿದಾಸ್ ಮಾತನಾಡಿ, ಪ್ರಶಸ್ತಿ ವಿಜೇತರೆಲ್ಲರೂ ಸಾಕಷ್ಟು ಅಡೆತಡೆಗಳನ್ನು ಮೀರಿ ಗುರಿ ಸಾಧಿಸಿದ್ದಾರೆ. ಅಂತೆಯೇ ನಮ್ಮ ಸಮಾಜಕ್ಕೆ ಮಾಧ್ಯಮಗಳ ಕೊಡುಗೆ ದೊಡ್ಡದಿದೆ,” ಎಂಬುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ಯೂನಿವರ್ಸಿಟಿ ಕುಲಪತಿ ಪ್ರೊ. ಐನುಲ್ ಹಸನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ | Raj B Shetty | ಮಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ: ನಾಯಕಿ ರಾಷ್ಟ್ರ ಪ್ರಶಸ್ತಿ ವಿಜೇತೆ!