ಸೊರಬ: ಸರ್ಕಾರವೇ ನಮ್ಮ ಅವಶ್ಯಕತೆಗಳ ಪೂರೈಕೆಗಳಿಗೆ ಮುಂದಾಗಲಿ ಎಂಬ ಧೋರಣೆ ಬಿಟ್ಟು ನಾಗರಿಕರೂ ಕೈಜೋಡಿಸಿದರೆ ಅಭಿವೃದ್ಧಿ ಸಾಧ್ಯ. ಒಂದು ದೇಶದ, ನಾಡಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಚಂದ್ರಗುತ್ತಿ ಹೋಬಳಿ ಕೆರೆಮನೆ ಗ್ರಾಮದವರು ಹೆಜ್ಜೆಯನ್ನಿಟ್ಟಿದ್ದು, ಕೆರೆ ಸ್ವಚ್ಛತಾ (Lake Cleanliness) ಕಾರ್ಯದ ಮೂಲಕ ಕಾಯಕಲ್ಪಕ್ಕೆ ಕೈಜೋಡಿಸಿದ್ದಾರೆ.
ಈ ವೇಳೆ ಜೀವವೈವಿಧ್ಯ ಮಂಡಳಿಯ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಭೇಟಿ ನೀಡಿ ಮಾತನಾಡಿ, ಗ್ರಾಮಸ್ಥರ ಈ ಸೇವೆ ಶ್ಲಾಘನೀಯ. ಕೆರೆಯ ಸ್ವಚ್ಛತೆ ಮಾಡುವುದರಿಂದ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಲಿದೆ. ಅಲ್ಲದೆ, ಕರೆ ಏರಿ ಮೇಲಿನ ಮರಗಳನ್ನು ಉಳಿಸಿಕೊಂಡು ಸ್ವಚ್ಛತೆಯನ್ನು ಮಾಡಬೇಕು. ಮರ ತೆಗೆದರೆ ಅದರ ನಿರ್ಜೀವ ಬೇರುಗಳು ಕೆರೆಯ ಏರಿಯನ್ನು ಶಿಥಿಲಗೊಳಿಸುತ್ತವೆ. ವೃಕ್ಷ ಉಳಿಸುವ ಮೂಲಕ ಕೆರೆಯ ತೇವಾಂಶವನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ: Border Dispute: ಅಮಿತ್ ಶಾ ಸಂಧಾನ ಸಭೆ ನಿರ್ಣಯದ ಉಲ್ಲಂಘನೆಯಾಗಿದೆ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಎಂ ಬೊಮ್ಮಾಯಿ ಆಕ್ರೋಶ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾಲ್ಮೀಕಿ ಸಂಘ, ಶಿವಾಜಿ ಬಳಗ, ಬಜರಂಗ ದಳ, ನಮೋ ಬ್ರಿಗೇಡ್ ಸಂಘಟಕರು, ಕೆರೆಮನೆ, ಹರೀಶಿ ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.