Site icon Vistara News

Lakkundi Festival: ಲಕ್ಕುಂಡಿ ಉತ್ಸವಕ್ಕೆ ಮೆರುಗು ನೀಡಿದ ಕಲಾ ತಂಡಗಳ ಅದ್ಧೂರಿ ಮೆರವಣಿಗೆ

Lakkundi Festival gadaga lakkundi village

#image_title

ಮಹಲಿಂಗೇಶ್ ಹಿರೇಮಠ, ವಿಸ್ತಾರ ನ್ಯೂಸ್, ಗದಗ

ದಾನ ಚಿಂತಾಮಣಿ ಅತ್ತಿಮಬ್ಬೆ ಕರ್ಮ ಭೂಮಿ, ಶಿಲ್ಪಕಲೆಯ ತವರೂರಾದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂರು ದಿನಗಳ ಅದ್ಧೂರಿ ಲಕ್ಕುಂಡಿ ಉತ್ಸವಕ್ಕೆ (Lakkundi Festival) ಶುಕ್ರವಾರ (ಫೆ.೧೦) ಚಾಲನೆ ನೀಡಲಾಯಿತು.

ಹಿಂದಿನ ಪೀಳಿಗೆಯ ಸಾಂಸ್ಕೃತಿಕ ಅನಾವರಣದ ಉದ್ದೇಶದಿಂದ ಲಕ್ಕುಂಡಿ ಉತ್ಸವವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ‌ ಮತ್ತು‌ ಸಂಸ್ಕೃತಿ‌ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಅಂಗವಾಗಿ ಶುಕ್ರವಾರ (ಫೆ.೧೦) ಅದ್ಧೂರಿ ಮೆರವಣಿಗೆ ನಡೆಯಿತು.

ಸಾವಿರಾರು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣದಲ್ಲಿ ಚಿಣ್ಣರು,…ಸಪ್ತ ಅಶ್ವಗಳ ಸಾರೋಟದಲ್ಲಿ ನಾಡ ದೇವಿಯ ಸಾನ್ನಿಧ್ಯ, ವಿವಿಧ ಕಲಾ ತಂಡಗಳ ಕುಣಿತ ಹೀಗೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಸಾಂಸ್ಕೃತಿಕ ಕಲಾ ಲೋಕವೇ ಕಂಡು ಬಂದಿತು.

ಇದನ್ನೂ ಓದಿ: Cristiano Ronaldo: ಅಲ್​ ನಾಸರ್ ಪರ 4 ಗೋಲ್​ ಬಾರಿಸಿ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸೇರಿದಂತೆ ವಿವಿಧ ಗಣ್ಯರು ಚಾಲನೆ ನೀಡಿದರು. ಮಂಗಲವಾದ್ಯ, ವೀರಗಾಸೆ, ಚಂಢಿ ವಾದ್ಯ, ಗೊಂಬೆ ಕುಣಿತ, ನಂದಿಕೋಲು‌ ಮೇಳ, ಕರಡಿ ಮಝಲು, ಜಗ್ಗಲಿಗೆ ಮೇಳ, ಸಮ್ಮೇಳ ವಾದ್ಯ, ಜಾಂಝ್ ಮೇಳ, ಮಹಿಳಾ ಡೊಳ್ಳು ಕುಣಿತ, ಹೀಗೆ ವಿವಿಧ ರೀತಿಯ ಕಲಾ ಮೇಳಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದವು. ಸಾರೋಟದಲ್ಲಿ ಕನ್ನಡ ತಾಯಿ ನಾಡ ದೇವಿ ವಿರಾಜಮಾನಳಾಗಿದ್ದ ಭಾವಚಿತ್ರದ ಮೆರವಣಿಗೆಯೂ ನಡೆಯಿತು. ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಿಂದ ಪ್ರಾರಂಭವಾದ ಮೆರವಣಿಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇದನ್ನೂ ಓದಿ: P K Rosy: ಮೊದಲ ದಲಿತ ಅಭಿನೇತ್ರಿ ಪಿ.ಕೆ. ರೋಸಿಗೆ ಡೂಡಲ್‌ ಮೂಲಕ ಗೌರವ ಸಲ್ಲಿಸಿದ ಗೂಗಲ್‌

ಮುಖ್ಯ ವೇದಿಕೆಯ ಮುಂಭಾಗ ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ‌ ಮೇಳ, ಕೃಷಿ ವಸ್ತು ಪ್ರದರ್ಶನ, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ, ಸ್ವಚ್ಛ ಭಾರತ್ ಮಿಷನ್ ಮಾಹಿತಿ ಪ್ರದರ್ಶನ ಮಳಿಗೆ, ಆಹಾರ ಪದ್ಧತಿಗಳ ಕುರಿತು ಜಾಗೃತಿ ಮತ್ತು ಪ್ರಾತ್ಯಕ್ಷಿಕೆ, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಸಾರಿಗೆ ಇಲಾಖೆಯಿಂದ ಗದಗ ನಗರದಿಂದ ಹತ್ತಕ್ಕೂ ಹೆಚ್ಚು ಬಸ್ಸುಗಳು ಲಕ್ಕುಂಡಿ ಗ್ರಾಮಕ್ಕೆ ಉಚಿತವಾಗಿ ಸೇವೆ ಆರಂಭಿಸಿದೆ. ಲಕ್ಕುಂಡಿ ಗ್ರಾಮವು ಸಚಿವ ಸಿ.ಸಿ.ಪಾಟೀಲ್ ಅವರ ವಿಧಾನ‌ ಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಸಚಿವರ ನೇತೃತ್ವದಲ್ಲಿ ಅದ್ಧೂರಿಯಾಗಿ ಉತ್ಸವವು ಜರುಗುತ್ತಿದೆ.

#image_title
#image_title
#image_title
ಲಕ್ಕುಂಡಿ ಉತ್ಸವದ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನೋಟ.

ಇದನ್ನೂ ಓದಿ: Rohit Sharma: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ

Exit mobile version