Site icon Vistara News

Land Acquisition: ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನಿರ್ಧಾರ ಖಂಡಿಸಿ ಪ್ರತಿಭಟನೆ

Lawyers protest Land Acquisition sagara

#image_title

ಸಾಗರ: “ಅಭಿವೃದ್ದಿ ಹೆಸರಿನಲ್ಲಿ ವೈಯಕ್ತಿಕ ಪ್ರತಿಷ್ಠೆ ಮೆರೆಸುವ ಕೆಲಸ ನಡೆಯಬಾರದು. ರಸ್ತೆ ಅಗಲೀಕರಣ ಮಾಡುವಾಗ ಸರ್ವಸಮ್ಮತವಾದ ನಿರ್ಧಾರ ತೆಗೆದುಕೊಳ್ಳಬೇಕೇ ವಿನಃ, ಯಾರನ್ನೋ ಓಲೈಸಲು ಒಂದು ಭಾಗವನ್ನು ಮಾತ್ರ ಒಡೆಯುವುದು (Land Acquisition) ಕಾನೂನುಬಾಹಿರ” ಎಂದು ಹೈಕೋರ್ಟ್‍ನ ಹಿರಿಯ ನ್ಯಾಯವಾದಿ ಕೆ. ದಿವಾಕರ್ ದೂರಿದರು.

ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ಗುರುವಾರ (ಮಾ.2) ರಾಷ್ಟ್ರೀಯ ಹೆದ್ದಾರಿ 206ರ ಅಗಲೀಕರಣ ಹೆಸರಿನಲ್ಲಿ ಎನ್.ಜಿ.ಒ. ಹೋಮ್‍ನಿಂದ ಪೊಲೀಸ್ ಸ್ಟೇಷನ್ ವೃತ್ತದವರೆಗೆ ಒಂದೇ ಭಾಗದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನಿರ್ಧಾರವನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: Ram Charan: ಅಮೆರಿಕದಲ್ಲಿ ಆರ್‌ಆರ್‌ಆರ್‌ ಪ್ರದರ್ಶನ ವೇಳೆ ಪ್ರೇಕ್ಷಕರ ಜತೆ ಸೆಲ್ಫಿ ಹಂಚಿಕೊಂಡ ರಾಮ್‌ ಚರಣ್‌

“ನ್ಯಾಯಾಲಯ ಸಂಕೀರ್ಣಕ್ಕೆ ಇರುವುದು ಮೂರು ಎಕರೆ ಜಾಗ. ಅಗಲೀಕರಣ ಹೆಸರಿನಲ್ಲಿ ನ್ಯಾಯಾಲಯದ ಒಂದು ಭಾಗವನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ನ್ಯಾಯಾಲಯ ವಿರೋಧಿ ನೀತಿಯಾಗಿದೆ. ಇದರ ಜೊತೆಗೆ ಲಕ್ಷಾಂತರ ಜನರಿಗೆ ವಿದ್ಯಾ ದಾನ ನೀಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಂದು ಭಾಗವನ್ನೂ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದು ಖಂಡನೀಯ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತಕ್ಷಣ ತನ್ನ ತಪ್ಪನ್ನು ಸರಿಪಡಿಸಿಕೊಂಡು ರಸ್ತೆಯ ಎರಡೂ ಭಾಗದಲ್ಲೂ ಭೂಸ್ವಾಧೀನ ಮಾಡಿಕೊಂಡು ರಸ್ತೆ ಅಗಲೀಕರಣ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟದ ಜೊತೆಗೆ ಇನ್ನಷ್ಟು ಉಗ್ರವಾದ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Air India Recruitment 2023 : ಪಿಯುಸಿ ಆದವರಿಗೂ ಏರಿ ಇಂಡಿಯಾದಲ್ಲಿ ಉದ್ಯೋಗ; ಇಲ್ಲಿದೆ ಸಂಪೂರ್ಣ ಮಾಹಿತಿ

ಹಿರಿಯ ನ್ಯಾಯವಾದಿ ಕೆ.ಎನ್.ಶ್ರೀಧರ್ ಮಾತನಾಡಿ, “ತ್ಯಾಗರ್ತಿ ಕ್ರಾಸ್‍ನಿಂದ ಎಲ್.ಬಿ.ಕಾಲೇಜುವರೆಗೆ ಎರಡೂ ಕಡೆ ಸ್ವಾಧೀನಪಡಿಸಿಕೊಳ್ಳುತ್ತಿದ್ದು, ಈ ಭಾಗದಲ್ಲಿ ಮಾತ್ರ ಒಂದೇ ಭಾಗದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ನೀತಿ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ರಸ್ತೆ ಅಗಲೀಕರಣಕ್ಕೆ ನ್ಯಾಯಾಲಯದ ಜಾಗವನ್ನು ವಶಪಡಿಸಿಕೊಂಡರೆ ಕಲಾಪಕ್ಕೆ ತೊಂದರೆಯಾಗುತ್ತದೆ. ಜ್ಯೂನಿಯರ್ ಕಾಲೇಜು ಭಾಗದಲ್ಲಿ ಭೂಸ್ವಾಧೀನ ಮಾಡಿದರೆ ಮಕ್ಕಳು ಕಾಲೇಜಿನಿಂದ ಹೊರಗೆ ಬರುವುದೇ ಕಷ್ಟವಾಗುತ್ತದೆ. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಪೊಲೀಸ್ ಠಾಣೆಯು ಪೂರ್ಣ ಹೋಗುತ್ತದೆ. ಪ್ರಾಧಿಕಾರದ ಈ ಅವೈಜ್ಞಾನಿಕ ನಿರ್ಧಾರದ ವಿರುದ್ಧ ವಕೀಲರು ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿ ಬಂದಿದೆ” ಎಂದರು.

ಇದನ್ನೂ ಓದಿ: ಗ್ಯಾಸ್​ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ ಸಚಿವೆ ಸ್ಮೃತಿ ಇರಾನಿಯವರ ಹಳೇ ಟ್ವೀಟ್ ವೈರಲ್​; ರಸ್ತೆಗಿಳಿಯಿರಿ ಎಂದ ಕಾಂಗ್ರೆಸ್​

ವಕೀಲರ ಸಂಘದ ಮಾಜಿ ಅಧ್ಯಕ್ಷ ರವೀಶ್ ಮಾತನಾಡಿ, “ಕಳೆದ ಐದು ವರ್ಷದಲ್ಲಿ ಸಾಗರದಲ್ಲಿ ಅಸವಿಂಧಾನಿಕ, ಅಲಿಖಿತ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಎರಡು ಮೂರು ಅಭಿವೃದ್ಧಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟು ಪೂರ್ಣ ಅಭಿವೃದ್ಧಿಯಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸ್ವಾತಂತ್ರ್ಯಪೂರ್ವದ ನ್ಯಾಯಾಲಯದ ಜಾಗವನ್ನು ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗುತ್ತಿರುವ ಕ್ರಮ ಕಾನೂನುಬಾಹಿರ. ಯಾರದ್ದೋ ಜಾಗವನ್ನು ಉಳಿಸಲು ಇಂತಹ ಹುನ್ನಾರ ಆಳುವವರು ನಡೆಸುತ್ತಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಇಂತಹ ಕೆಟ್ಟ ಅಭಿವೃದ್ಧಿಗೆ ಸಹಕಾರ ನೀಡಬಾರದು. ಹೆದ್ದಾರಿ ಪ್ರಾಧಿಕಾರದ ಸಚಿವರಾದ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದು ಎರಡೂ ಭಾಗದಲ್ಲಿ ಭೂಸ್ವಾಧೀನಪಡಿಸಿಕೊಂಡು ರಸ್ತೆ ನಿರ್ಮಿಸಲು ಮುಂದಾಗಬೇಕು. ಇಲ್ಲವಾದಲ್ಲಿ ವಕೀಲರ ಸಂಘ ಇನ್ನಷ್ಟು ಉಗ್ರವಾದ ಪ್ರತಿಭಟನೆ ನಡೆಸುತ್ತದೆ” ಎಂದು ಎಚ್ಚರಿಕೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಇ., ಕಾರ್ಯದರ್ಶಿ ರಮೇಶ್ ಎಚ್.ಬಿ. ಉಪಾಧ್ಯಕ್ಷ ಎಚ್.ಆರ್. ಶ್ರೀಧರ್, ಖಜಾಂಚಿ ಕಿರಣ ಕುಮಾರ್, ಪ್ರಮುಖರಾದ ಎಚ್.ಎನ್.ದಿವಾಕರ್, ಟಿ.ಬಿ.ಮಂಜುನಾಥ ಶೆಟ್ಟಿ, ವಿ.ಶಂಕರ್, ಎಂ.ರಾಘವೇಂದ್ರ, ಎಚ್.ಬಿ.ರಾಘವೇಂದ್ರ, ಮರಿದಾಸ್, ಕೆ.ವಿ.ಪ್ರವೀಣ್, ಉಲ್ಲಾಸ್, ವಿನಯ ಕುಮಾರ್, ಪ್ರೇಮ್ ಸಿಂಗ್, ರಮೇಶ್ ಮರಸ, ಚೇತನ ರಾಜ್ ಕಣ್ಣೂರು, ಅಣ್ಣಪ್ಪ ಎಚ್.ಕೆ., ಜಾಹಿದ್ ಅಹ್ಮದ್, ರಾಘವೇಂದ್ರ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Sonia Gandhi: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮತ್ತೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

Exit mobile version