ಉತ್ತರ ಕನ್ನಡ: ಜಿಲ್ಲೆಯ ಘಟ್ಟ ಪ್ರದೇಶದ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಕಲ್ಲು, ಮಣ್ಣು ಕುಸಿಯುತ್ತಿದೆ. ಜೋಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ಭಾರಿ ಮಳೆಯಿಂದ ಮತ್ತೆ ಭೂಕುಸಿತ ಸಂಭವಿಸಿದೆ. ಕಳೆದೆರಡು ವಾರಗಳಲ್ಲಿ ಮೂರನೇ ಬಾರಿಗೆ ಇಲ್ಲಿ ಭೂ ಕುಸಿತ ಉಂಟಾಗಿದೆ.
ಘಟ್ಟದ ರಸ್ತೆಯ ಮೇಲೆ ಭೂಕುಸಿತವಾಗಿ ಮರ, ಕಲ್ಲು, ಮಣ್ಣು ಬಿದ್ದಿರುವುದರಿಂದ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಪರ್ಯಾಯ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ಈ ಹಿಂದೆಯೇ ಅಪಾಯದ ಬಗ್ಗೆ ಕೇಂದ್ರ ಭೂವಿಜ್ಞಾನಿಗಳ ತಂಡ ವರದಿ ನೀಡಿತ್ತು. ಮಳೆ ಹೆಚ್ಚಳ ಬೆನ್ನಲ್ಲೇ ಭೂಕುಸಿತ ಪುನರಾವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಿನ ಕಳೆದಂತೆ ಈ ಭಾಗದಲ್ಲಿ ಆತಂಕ ಹೆಚ್ಚಾಗುತ್ತಿದೆ.
ಅದೇ ರೀತಿ ನಿರಂತರ ಮಳೆಗೆ ಜೋಯಿಡಾದ ಕಾತೇಲಿ ಗ್ರಾಮದಲ್ಲಿ ಕಿರಣ ದುಬಳೆ ಎಂಬುವವರ ಜಾನುವಾರು ಕೊಟ್ಟಿಗೆ ಕುಸಿದು ಸುಮಾರು 50 ಸಾವಿರ ರೂಪಾಯಿ ನಷ್ಟವಾಗಿದೆ. ಕೊಟ್ಟಿಗೆಯಲ್ಲಿದ್ದ ಕೊಟ್ಟಿಗೆಯಲ್ಲಿದ್ದ 4 ಹಸು, 2 ಎಮ್ಮೆಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕೊಟ್ಟಿಗೆಯಲ್ಲಿದ್ದ ಒಣಹುಲ್ಲು ನೀರುಪಾಲಾಗಿದೆ.
ಧಾರವಾಡ ಗ್ರಾಮೀಣ ಭಾಗದಲ್ಲಿ ಆತಂಕ
ಧಾರವಾಡ: ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ನಿರಂತರ ಮಳೆಗೆ ಹಲವು ಮನೆ ಕುಸಿದು ಬಿದ್ದಿವೆ. ಇದೀಗ ಮತ್ತೆ ಹಲವು ಗ್ರಾಮಗಳಲ್ಲಿ ಮನೆ ಕುಸಿತ ಆಗಿರುವುದರಿಂದ ಆತಂಕದ ನಡುವೆಯೇ ಗ್ರಾಮೀಣ ಭಾಗದ ಜನರು ವಾಸಿಸುತ್ತಿದ್ದಾರೆ.
ಮಳೆ ಕುರಿತ ಇಂದಿನ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
೧. Rain News | ಮುಂದುವರಿದ ಮಳೆಯ ಪಿರಿಪಿರಿ, ರೈತರಿಗೆ ಮುಳುವಾದ ಎತ್ತಿನಹೊಳೆ ಕಾಮಗಾರಿ
೨. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಜುಲೈ 15ರವರೆಗೆ ಭಾರಿ ಮಳೆ ಸಾಧ್ಯತೆ
3. Rain News | ಹಾಸನದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೆ ಭೂಕುಸಿತ; ವಾಹನ ಸಂಚಾರಕ್ಕೆ ಅಡಚಣೆ
4. Rain News | ಕಿತ್ತೂರು ತಾಲೂಕಿನಲ್ಲಿ ಮಳೆ ಹಾನಿಗೊಳಪಟ್ಟ ಮನೆಗಳ ಸಂಖ್ಯೆ 30ಕ್ಕೇರಿಕೆ