Site icon Vistara News

Language dispute | ಕನ್ನಡ ಸಿನಿಮಾ ಕಡೆಗಣನೆ; ಮರಾಠಿ ಸಿನಿಮಾದ ಫ್ಲೆಕ್ಸ್‌ಗೆ ಮಸಿ ಬಳಿದು ಆಕ್ರೋಶ

ಕಾರವಾರ: ಮಹಾರಾಷ್ಟ್ರದಿಂದ ಗಡಿ ತಗಾದೆ ಚಾಲ್ತಿಯಲ್ಲಿರುವಾಗಲೇ ಕಾರವಾರದಲ್ಲಿ ಮರಾಠಿ ಚಿತ್ರಪ್ರದರ್ಶನ (Language dispute) ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕನ್ನಡ ಹೊರತುಪಡಿಸಿ ಅನ್ಯ ಭಾಷೆಯ ಚಿತ್ರ ಪ್ರದರ್ಶಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದವರು, ಕಾರವಾರದ ಕಾಜುಭಾಗ್‌ನಲ್ಲಿರುವ ಅರ್ಜುನ್ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದರು.

ಶುಕ್ರವಾರದಿಂದ ಅರ್ಜುನ್ ಥಿಯೇಟರ್‌ನಲ್ಲಿ ಧೋಂಡಿ ಚಂಪ್ಯಾ ಏಕ್ ಪ್ರೇಮ್ ಕಥಾ ಎಂಬ ಮರಾಠಿ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿತ್ತು. ಅಲ್ಲದೆ, ಈ ಸಿನಿಮಾಕ್ಕೆ ಸಂಬಂಧಿಸಿದ ಬೃಹತ್ ಫ್ಲೆಕ್ಸ್, ಪೋಸ್ಟರ್‌ಗಳನ್ನು ಥಿಯೇಟರ್ ಮೇಲೆ ಅಳವಡಿಸಿ, ಹೆಡ್ ಬುಷ್ ಸಿನಿಮಾದ ಪೋಸ್ಟರ್‌ನ್ನು ಥಿಯೇಟರ್‌ನ ಹೊರ ಭಾಗದಲ್ಲಿ ಕಾಂಪೌಂಡ್‌ಗೆ ತಾಗಿಸಿ ಕೆಳಗೆ ಇಡಲಾಗಿತ್ತು.

ಇದರಿಂದಾಗಿ ಆಕ್ರೋಶಗೊಂಡ ಕರವೇ ಕಾರ್ಯಕರ್ತರು, ಥಿಯೇಟರ್ ಎದುರು ಜಮಾಯಿಸಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಥಿಯೇಟರ್‌ನಲ್ಲಿ ಕನ್ನಡ ಸಿನಿಮಾಕ್ಕೆ ಆದ್ಯತೆ ನೀಡದೆ ಮರಾಠಿ ಭಾಷೆ ಬೆಳೆಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮರಾಠಿ ಸಿನಿಮಾದ ಫ್ಲೆಕ್ಸ್‌ಗೆ ಮಸಿ ಬಳಿದು ತೆರವು ಮಾಡಲೂ ಒತ್ತಾಯಿಸಿದರು.

ಕರವೇ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸಿಬ್ಬಂದಿ ಮರಾಠಿ ಸಿನಿಮಾದ ಪೋಸ್ಟರ್ ತೆರವುಗೊಳಿಸಲಾಯಿತು. ಮರಾಠಿ ಸಿನಿಮಾ ಪ್ರದರ್ಶನ ಮಾಡದಂತೆಯೂ ಕರವೇ ಕಾರ್ಯಕರ್ತರು ಆಗ್ರಹಿಸಿದ್ದು, ಈ ಬಗ್ಗೆ ಥಿಯೇಟರ್ ಸಿಬ್ಬಂದಿ ಮಾಲೀಕರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Border Dispute | ಮಹಾಮೇಳಾವ್‌ಗಾಗಿ ಬೆಳಗಾವಿಗೆ ಬರಲಿದ್ದ ಮಹಾ ಸಂಸದನಿಗೆ ಗಡಿ ಪ್ರವೇಶ ನಿಷೇಧ: ಡಿಸಿ ಖಡಕ್‌ ಆದೇಶ

Exit mobile version