ಬೆಳಗಾವಿ: ರಾಜ್ಯದಲ್ಲಿ ಶಾಲಾ ವಾಹನಗಳಿಗೆ ಜಿಪಿಎಸ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಬೇಕು, ಗ್ರಾಮೀಣ ಪ್ರದೇಶದಿಂದ ಪಟ್ಟಣ/ನಗರಗಳಿಗೆ ಓದಲು ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಬೇಕು ಎಂದು ವಿಧಾನ ಮಂಡಲ ಹಿಂದುಳಿದ ವರ್ಗ- ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ಶಿಫಾರಸು ಮಾಡಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆಗಿರುವ ಎಸ್.ಕುಮಾರ ಬಂಗಾರಪ್ಪ ವರದಿ ಮಂಡನೆ ಮಾಡಿದರು. ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ಶೇ. ೨೫ ಸೀಟು ಇತರರಿಗೂ ನೀಡಬೇಕು ಎಂಬುದು ಸಮಿತಿಯ ಇನ್ನೊಂದು ಪ್ರಮುಖ ಸಲಹೆ.
ಪ್ರಮುಖ ಶಿಫಾರಸುಗಳು
– ಸರಕಾರದ ಬೊಕ್ಕಸದಿಂದ ಖರ್ಚಾಗುವ ಪ್ರತಿ ರೂಪಾಯಿಯು ಬಡವರು, ಹಿಂದುಳಿದವರು ಮತ್ತು ದೀನ ದಲಿತರ ಕಲ್ಯಾಣಕ್ಕೆ ಅನುಕೂಲವಾಗುವಂತೆ ದೀರ್ಘಾವಧಿಯ ಯೋಜನೆ ಜಾರಿಗೊಳಿಸಬೇಕು.
– ಹೊಸ ಹೊಸ ಯೋಜನೆಗಳನ್ನು ಕೊಡುವುದರ ಬದಲು ಇರುವ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಬೇಕು.
– ರಾಜ್ಯದ ಆರ್ಥಿಕ ಬಲವರ್ಧನೆಗೊಳಿಸಬೇಕು.
– ಪ್ರತಿಯೊಂದು ಪ್ರತಿಷ್ಠಾನವೂ ವರದಿಯನ್ನು ಸಲ್ಲಿಸಲು ಸಮಯ ನಿಗದಿ ಮಾಡಬೇಕು.
– ಕ್ರೈಸ್ ಸಂಸ್ಥೆ ಇರುವಂತೆ ಅಲ್ಪಸಂಖ್ಯಾತ ಹಾಸ್ಟೆಲ್‍ಗಳಿಗೆ ಒಂದು ಸಂಸ್ಥೆ ಸ್ಥಾಪಿಸಬೇಕು.
– ಅಲ್ಪಸಂಖ್ಯಾತ ಹಾಸ್ಟೆಲ್‍ಗಳಿಗೆ ಶೇ.25ರಷ್ಟು ಬೇರೆ ವರ್ಗದವರಿಗೆ ಪ್ರವೇಶಾತಿ ನೀಡಬೇಕು.
– ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸರ್ವೆ ಕಾರ್ಯವನ್ನು ಕಾಲಮಿತಿ ನಿಗದಿಪಡಿಸಿ, ಸರ್ವೆ ಮತ್ತು ಖಾತೆ ಕಾರ್ಯವನ್ನು ಪೂರ್ಣಗೊಳಿಸುವುದು. ವಾರದಲ್ಲಿ ಐದು ದಿನ ವಿಚಾರಣೆ ನಡೆಸಿ ವಕ್ಪ್ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗುವಂತೆ ಮಾಡಬೇಕು.
ಇದನ್ನೂ ಓದಿ | Hostel Admission | 2ನೇ ಪದವಿಯ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಸಿಗಲ್ಲ ಹಾಸ್ಟೆಲ್; ಬೆಂಗಳೂರು ವಿವಿ ಸುತ್ತೋಲೆ