ಕಾರವಾರ/ ವಿಜಯನಗರ: ರಾಜ್ಯದಲ್ಲಿ ಚಿರತೆ ದಾಳಿ (Leopard Attack) ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮತ್ತೆ ಚಿರತೆ ಕಾಟ ಆರಂಭವಾಗಿದೆ. ಎರಡು ವಾರದಲ್ಲಿ 6 ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದೆ.
ಕಳೆದೊಂದು ವಾರದಿಂದ ಸಾಲ್ಕೋಡು, ಕೊಂಡದಕುಳಿ, ಕೆರೆಮನೆ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. 2 ಕರುಗಳು ಸೇರಿ 6 ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಪದೆ ಪದೇ ಚಿರತೆ ದಾಳಿಯಿಂದಾಗಿ ಹೊನ್ನಾವರ ಭಾಗದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಚಿರತೆ ದಾಳಿಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತುಕೊಂಡಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಆದಷ್ಟು ಬೇಗ ಚಿರತೆ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Modi In Karnataka : ರೈತರ ಸಂಕಟಗಳಿಗೆ ಮೋದಿ, ಬೊಮ್ಮಾಯಿ ಕಾರಣ; 11 ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದರಾಮಯ್ಯ ಸವಾಲು
ವಿಜಯನಗರದಲ್ಲೂ ಚಿರತೆ ಭೀತಿ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಪವರ್ ಹೌಸ್‌ನಲ್ಲಿ (HPC) ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಕಾಣಿಸಿಕೊಂಡ ಸುದ್ದಿ ಕೇಳಿ ಜನರು ಭಯಭೀತರಾಗಿದ್ದಾರೆ. ಕಳೆದ ಬುಧವಾರವೂ ಚಿರತೆ ಪ್ರತ್ಯಕ್ಷವಾಗಿತ್ತು, ಈಗ ಮತ್ತೆ ವಿದ್ಯುತ್ ಪೂರೈಕೆ ಮಾಡುವ ಕೇಂದ್ರದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಪ್ರತ್ಯಕ್ಷ್ಯವಾಗಿರುವ ದೃಶ್ಯವೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಕೇಂದ್ರಕ್ಕೆ ಬರಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ