Site icon Vistara News

Leopard Attack : ಬಹಿರ್ದೆಸೆಗೆ ಹೋದವನ ಮೇಲೆ ಚಿರತೆ ದಾಳಿ; ಕಿತ್ತು ಬಂತು ಕರುಳು

Leopard Attack

ಚಿತ್ರದುರ್ಗ: ಆಹಾರ ಅರಸಿ ಕಾಡಿನಿಂದ ನಾಡಿಗೆ ಕಾಡುಪ್ರಾಣಿಗಳು ಬರುತ್ತಿದ್ದು, ಸಿಕ್ಕ ಸಿಕ್ಕ ಜಾನುವಾರು, ಜನರ ಮೇಲೆ ದಾಳಿ ಮಾಡುತ್ತಿದೆ. ಹುಲಿ, ಆನೆ, ಕರಡಿ ಜತೆಗೆ ಚರತೆ ಹಾವಳಿಯು ಹೆಚ್ಚಾಗುತ್ತಿದೆ. ಸದ್ಯ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಚಿರತೆಯೊಂದು ದಾಳಿ (Leopard Attack ) ಮಾಡಿದೆ.

ಗ್ರಾಮದ ನಿವಾಸಿ ಬಸವರಾಜ್ (45) ಚಿರತೆ ದಾಳಿಗೆ ಒಳಗಾದವರು. ಗ್ರಾಮದ ಸ್ಮಶಾನದ ಸಮೀಪ ಬಸವರಾಜ್ ಬಹಿರ್ದೆಸೆಗೆ ಹೋಗಿದ್ದರು. ಈ ವೇಳೆ ಹಿಂದಿನಿಂದ ಬಂದ ಚಿರತೆ ಏಕಾಏಕಿ ಎಗರಿ ಪರಚಿದೆ. ಚಿರತೆ ದಾಳಿಗೆ ಬೆಚ್ಚಿ ಬಿದ್ದ ಬಸವರಾಜ್‌ ಕೂಗಾಡಿಕೊಂಡಿದ್ದಾರೆ.

ಇದನ್ನೂ ಓದಿ: Elephant Calf : ತಾಯಿಯಿಂದ ಬೇರ್ಪಟ್ಟು ಅಲೆಯುತ್ತಿರುವ ಮರಿಯಾನೆ; ಎಲ್ಲಿದ್ದಾಳೆ ಅಮ್ಮ?

ಚಿರತೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ, ಆದರೂ ಬಿಡದ ಚಿರತೆಯು ಬಸವರಾಜ್ ಅವರ ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ಚಿರತೆ ದಾಳಿಯಿಂದ ದೇಹದಿಂದ ಕರುಳು ಹೊರ ಬಂದಿದೆ. ಹೇಗೋ ಚಿರತೆಯೊಂದಿಗೆ ಹೋರಾಡಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಸದ್ಯ ಗಾಯಾಳು ಬಸವರಾಜ್‌ ಅವರನ್ನು ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

Leopard Attack

ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಚಿರತೆ

ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಸೇರಿ ಸುತ್ತಮುತ್ತ ಗ್ರಾಮಗಳಿಗೆ ಚಿರತೆ ಉಪಟಳ ನೀಡುತ್ತಿತ್ತು. ಮೊನ್ನೆ ಅಷ್ಟೇ ಬಾಚಹಳ್ಳಿ ಗ್ರಾಮದಲ್ಲಿ ಚಿರತೆಯು ಹಸುವಿನ ಮೇಲೆ ದಾಳಿ ಮಾಡಿ ತಿಂದು ಹಾಕಿತ್ತು. ಹೀಗಾಗಿ ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಅರಣ್ಯಾಧಿಕಾರಿಗಳು ಚಿರತೆ ಸೆರೆಗಾಗಿ ನಿನ್ನೆ ಶುಕ್ರವಾರ ಬೋನ್ ಇಟ್ಟಿದ್ದರು. ತಡ ರಾತ್ರಿ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version