ತುಮಕೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿದ್ದ ಚಿರತೆಗಳು ಸಿಕ್ಕ ಸಿಕ್ಕ ಜಾನುವಾರುಗಳ ಮೇಲೆ ದಾಳಿ ನಡೆಸಿ (Leopard Attack) ಹೋಗುತ್ತಿದ್ದವು. ಇದೀಗ ಚಿಕ್ಕನಾಯಕನಹಳ್ಳಿ ತಾಲೂಕಿನ ಯಗಚಿಹಳ್ಳಿ ಗ್ರಾಮದ ತೋಟದ ಫಾರಂಗೆ ನುಗ್ಗಿದ ಚಿರತೆಯೊಂದು 200 ಕೋಳಿಗಳನ್ನು ತಿಂದು ಮುಗಿಸಿದೆ.
ಮಹಾಲಕ್ಷ್ಮಿ ಗಿರೀಶ್ ಎಂಬುವರಿಗೆ ಸೇರಿದ ಕೋಳಿ ಫಾರಂಗೆ ಚಿರತೆ ನುಗ್ಗಿದ್ದು 200 ಕೋಳಿಗಳ ಮಾರಣಹೋಮವಾಗಿದೆ. ಸಾಲಸೋಲ ಮಾಡಿ ಕೋಳಿ ಫಾರಂ ಮಾಡಲಾಗಿತ್ತು. ಈಗ ಚಿರತೆ ದಾಳಿಯಿಂದಾಗಿ ಎಲ್ಲ ಕೋಳಿಗಳು ಮೃತಪಟ್ಟಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಫಾರಂ ಮಾಲೀಕರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Murder Case: ಸಾಮಾಜಿಕ ಕಾರ್ಯಕರ್ತೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ
ಕಾಡು ಪ್ರಾಣಿಗಳ ದಾಳಿಯಿಂದ ಜಾನುವಾರುಗಳು ಸತ್ತರೆ ಪರಿಹಾರ ನೀಡುವ ಅರಣ್ಯ ಇಲಾಖೆ, ಕೋಳಿಗಳ ಸಾವಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ತುಮಕೂರು ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಆತಂಕ ಮೂಡಿಸಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ