ರಿಪ್ಪನ್‌ಪೇಟೆ: ಇಲ್ಲಿನ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಮೀಪದ ಮುಗುಡ್ತಿ ಅರಣ್ಯ ವಲಯ ಮಳವಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆಯ ಬದಿಯಲ್ಲಿ ತಡರಾತ್ರಿ ಚಿರತೆಯೊಂದು (Leopard Attack) ಪ್ರತ್ಯಕ್ಷವಾಗಿದೆ. ಚಿರತೆ ಗರ್ಭಿಣಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದಿದ್ದು, ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಎಳೆದು ಸುಮಾರು ನೂರು ಅಡಿಯಷ್ಟು ದೂರದಲ್ಲಿ ಹಾಕಿ ಹೋಗಿದೆ.
ಮಳವಳ್ಳಿ ಗ್ರಾಮದ ಬಡ ರೈತ ವಿಶ್ವನಾಥ್ ಅವರಿಗೆ ಸೇರಿದ ಹಸು ಚಿರತೆಗೆ ದಾಳಿಗೆ ತುತ್ತಾಗಿದೆ. ಚಿರತೆಯ ದಾಳಿಯ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದಾರೆ.
ಮಳವಳ್ಳಿ ಸಂಪರ್ಕ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು, ಮಹಿಳೆಯರು ವಯೋವೃದ್ದರು ಓಡಾಡುತಿದ್ದು, ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ | Leopard Attack | ಚಿರತೆ ಕಾಟ, ಜನರಿಗೆ ಪ್ರಾಣ ಸಂಕಟ; ಸಾಕುನಾಯಿ, ಜಾನುವಾರುಗಳ ಮೇಲೆ ದಾಳಿ