Site icon Vistara News

Leopard Attack | ಬೆಂಗಳೂರು ಹೊರವಲಯದಲ್ಲಿ ನಿಲ್ಲದ ಚಿರತೆ ಹಾವಳಿ; ಶೆಡ್‌ಗೆ ನುಗ್ಗಿ ಮೇಕೆ ಬಲಿ ಪಡೆದ ಚಿರತೆ

ಬೆಂಗಳೂರು ಗ್ರಾಮಾಂತರ: ಇಲ್ಲಿನ ಹೊರವಲಯದಲ್ಲಿ ಚಿರತೆಯ ಉಪಟಳ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಚಿರತೆ ಸೆರೆ (Leopard Attack) ಹಿಡಿಯಲು ಅರಣ್ಯ ಇಲಾಖೆಯವರು ಬೋನು ಇರಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಚಿರತೆ ಗ್ರಾಮಗಳಿಗೆ ನುಗ್ಗಿ ಮೇಕೆಯೊಂದನ್ನು ಬಲಿ ಪಡೆದಿದೆ.

ನೆಲಮಂಗಲ ತಾಲೂಕಿನ ಗುರುವನಹಳ್ಳಿಯಲ್ಲಿ ಹನುಮಂತರಾಜು ಸೇರಿದ ಮೇಕೆ ಮೇಲೆ ಚಿರತೆ ದಾಳಿ ನಡೆಸಿದೆ. ಜೀವನಕ್ಕೆ ಆಧಾರವಾಗಿದ್ದ ಸುಮಾರು ಹದಿನೈದು ಸಾವಿರ ಮೌಲ್ಯದ ಮೇಕೆಯನ್ನು ಕಳೆದುಕೊಂಡು ರೈತ ದಂಪತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಇತ್ತ ನೆಲಮಂಗಲ ನಗರದ ಪಕ್ಕದಲ್ಲಿ‌ ಇರುವ ಬಡಾವಣೆಗಳಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಶಿವನಗರ, ಜಕ್ಕಸಂದ್ರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿದೆ. ಆದರೆ ಚಿರತೆ ಬೋನಿಗೆ ಬೀಳದೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದೆ. ಚಿರತೆಯಿಂದಾಗಿ ರೈತರು ತಮ್ಮ ಜಾನುವಾರುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕೆಂದು ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೆಶಕ ಸಿದ್ದಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ | Leopard Attack | ಒಂದೇ ದಿನ ಎರಡು ಚಿರತೆ ಸೆರೆ: ಮೈಸೂರಿನಲ್ಲಿ ಬೋನಿಗೆ ಬಿತ್ತು, ಉಡುಪಿಯಲ್ಲಿ ಬಾವಿಗೆ ಬಿತ್ತು!

Exit mobile version