ಬೆಂಗಳೂರು ಗ್ರಾಮಾಂತರ: ಇಲ್ಲಿನ ನೆಲಮಂಗಲ ತಾಲೂಕಿನ ಭೂಸಂದ್ರ, ಕಾಡುಕರೇನಹಳ್ಳಿಯಲ್ಲಿ ಚಿರತೆ (Leopard attack) ಪ್ರತ್ಯಕ್ಷಗೊಂಡಿತ್ತು. ಅಲ್ಲದೇ ಮನೆ ಮುಂದೆ ಕಟ್ಟಿದ್ದ ನಾಯಿಯೊಂದಕ್ಕೆ ಹೊಂಚು ಹಾಕಿ ಕುಳಿತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಚಿರತೆ ಸೆರೆಗೆ ಹಲವು ಗ್ರಾಮಗಳ ಮಂದಿ ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್‌ಗಳನ್ನು ಇರಿಸಿದ್ದರು. ಆದರೆ, ಈವರೆಗೆ ಒಂದು ಚಿರತೆ ಕೂಡ ಬೋನ್‌ಗೆ ಬಿದ್ದಿಲ್ಲ. ಈಗ ನೆಲಮಂಗಲದ ಕೆಂಪಲಿಂಗಹಳ್ಳಿ ಸಮೀಪದ ದೇವಾಂಗ ಮಠದ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಸ್ಥಳೀಯರ ಮೊಬೈಲ್‌ನಲ್ಲಿ ಚಿರತೆ ಓಡಾಟದ ದೃಶ್ಯ ಸೆರೆ ಸಿಕ್ಕಿದೆ.
ನೆಲಮಂಗಲ ಗ್ರಾಮೀಣ ಭಾಗದಲ್ಲಿ ಚಿರತೆ ಉಪಟಳದಿಂದ ಗ್ರಾಮಸ್ಥರು ಭೀತಿಗೊಂಡಿದ್ದರು. ಈಗ ಚಿರತೆ ನಗರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಆತಂಕಕ್ಕೆ ದೂಡಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Bangalore Chitra Santhe | ಚಿತ್ರಸಂತೆಯಲ್ಲಿ ರಂಗೇರಿದ ದೇಶಿ-ವಿದೇಶಿ ಕಲಾಕೃತಿಗಳು