Site icon Vistara News

Leopard Attack | ರಾತ್ರಿ ವೇಳೆ ಚಿರತೆ ಗಸ್ತು; ಜನರು ಮನೆಯಲ್ಲಿಯೇ ಸುಸ್ತು

ದಾವಣಗೆರೆ/ಬೆಂ.ಗ್ರಾಮಾಂತರ: ರಾಜ್ಯದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು ಜನರ ನಿದ್ದೆಗೆಡಿಸಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಚಿರತೆ (Leopard Attack) ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ರಾತ್ರಿ ವೇಳೆ ಮನೆಗಳ ಮುಂದೆ ಚಿರತೆ ಓಡಾಡಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲಿಂಗದಳ್ಳಿ ಗ್ರಾಮದ ಲೋಕೇಶ್ ನಾಯ್ಕ ಎಂಬುವವರ ಮನೆಯ ಮುಂದೆ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಡಂಚಿನ ಗ್ರಾಮಗಳು ಮಾತ್ರವಲ್ಲದೆ ಬೆಂಗಳೂರಿನ ಹೊರವಲಯದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಒಂದು ವಾರದಿಂದ ಜನರಿಗೆ ಚಿರತೆ ಭೀತಿ ಕಾಡುತ್ತಿದೆ. ಬೆಂಗಳೂರಿನ ಪಶ್ಚಿಮ ಭಾಗದ ಚಿಂಕುರ್ಚಿ ನಿವಾಸಿಗಳಲ್ಲಿ ಭಯದ ವಾತಾವರಣದಲ್ಲಿ ದಿನದೂಡುವಂತಾಗಿದೆ. ಕುರಿ ಮತ್ತು ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದ್ದು, ನಿವಾಸಿಗಳು ಹಾಗೂ ಬಹುತೇಕ ರೈತರು ಮನೆಗಳಿಂದ ಹೊರಬರಲು ಭಯಪಡುವಂತಾಗಿದೆ.

ಕುರಿ, ಮೇಕೆ, ಜಾನುವಾರು ಸಾವಿನ ನಷ್ಟಕ್ಕೆ ಪರಿಹಾರ ಕೇಳುತ್ತಿಲ್ಲ. ಆದರೆ, ಕೊನೇಪಕ್ಷ ಇಲಾಖೆಯವರು ಚಿರತೆಗಳನ್ನು ಹಿಡಿದು ಅರಣ್ಯಕ್ಕೆ ಸ್ಥಳಾಂತರಿಸಬೇಕು. ಗ್ರಾಮದ ಗಂಗರಾಜು ಎಂಬುವವರ ಒಡೆತನದ 200 ಎಕರೆ ಜಮೀನಿನಲ್ಲಿ ಕನಿಷ್ಠ 3 ಚಿರತೆಗಳಿರುವ ಶಂಕೆ ಇದ್ದು, ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Leopard Attack | ಕಬ್ಬಿನ ಗದ್ದೆಗೆ ನೀರು ಹಾಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ; ಪ್ರಾಣಾಪಾಯದಿಂದ ಪಾರು

Exit mobile version