Site icon Vistara News

Leopard Death : ಪತ್ರಕರ್ತನ ಮೇಲೆ ದಾಳಿ ಮಾಡಿದ್ದ ಚಿರತೆ ನಿಗೂಢ ಸಾವು!

Forest Officers and leopard dead body

ಬೀದರ್/ಚಿಕ್ಕಮಗಳೂರು: ಪತ್ರಕರ್ತನ ಮೇಲೆ ದಾಳಿ ಮಾಡಿದ್ದ ಚಿರತೆಯೊಂದು (Leopard Death) ನಿಗೂಢವಾಗಿ ಮೃತಪಟ್ಟ ಘಟನೆ ಬೀದರ್ (Bidar News) ತಾಲೂಕಿನ ಬಾವುಗೆ ಗ್ರಾಮದಲ್ಲಿ ನಡೆದಿದೆ. ಚಿರತೆಯ ಮೃತದೇಹವು ಕಾರಂಜಾ ಡ್ಯಾಂನ ಹಿನ್ನೀರಿನಲ್ಲಿ (Karanja Dam) ಪತ್ತೆ ಆಗಿದೆ.

ನಾಲ್ಕೈದು ದಿನದ ಹಿಂದೆ ಚಿರತೆ ಮೃತಪಟ್ಟಿರಬಹುದೆಂಬ ಶಂಕಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ನಿಗೂಢ ಸಾವಿನ ಬಗ್ಗೆ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ.

Leopard Found in chikkamangalur

ಕಳೆದೊಂದು ವರ್ಷದಿಂದ ಬೀದರ್‌ನ ಕೆಲವು ಗ್ರಾಮದಲ್ಲಿ ಚಿರತೆಯೊಂದು ಓಡಾಡಿಕೊಂಡಿತ್ತು. ಈಗ ಮೃತಪಟ್ಟ ಚಿರತೆ ಇದೆಯೋ ಅಥವಾ ಬೇರೆ ಚಿರತೆಯೋ ಎಂಬ ಗೊಂದಲದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಾರೆ.

ಇದನ್ನೂ ಓದಿ: Rain News : ಮಳೆಗೆ ಮನೆ ಗೋಡೆ ಕುಸಿತ; 100ಕ್ಕೂ ಹೆಚ್ಚು ಕುರಿಗಳ ಸಾವು!

ಚಿರತೆ ಓಡಾಟ ಡ್ರೋನ್‌ ಕ್ಯಾಮೆರಾದಲ್ಲಿ ಪತ್ತೆ

ಶಿವಗಂಗಾ ಗಿರಿಯಲ್ಲಿ ಚಿರತೆಗಳು ಪತ್ತೆ

ಚಿಕ್ಕಮಗಳೂರಲ್ಲಿ ಕಾಡಾನೆ ಹಾವಳಿ ಬಳಿಕ ಇದೀಗ ಚಿರತೆಗಳ ಕಾಟ ಶುರುವಾಗಿದೆ. ಡ್ರೋನ್ ಕ್ಯಾಮರಾದಲ್ಲಿ ಚಿರತೆಗಳ ಚಲನ-ವಲನ ಸೆರೆಯಾಗಿದೆ. ಕಡೂರು ತಾಲೂಕಿನ ಯಗಟಿ ಸಮೀಪದ ಪ್ರಸಿದ್ಧ ಶಿವಗಂಗಾಗಿರಿ ಬೆಟ್ಟದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದೆ.

ಬೆಟ್ಟದ ಮೇಲಿನ ಕಲ್ಲಿನ ಬಂಡೆ ಮೇಲೆ ಮೂರು ಚಿರತೆಗಳಿವೆ. ಶಿವಗಂಗಾ ಗಿರಿಯ ಕೆಳಗಿರುವ ದೇವಾಲಯದ್ದಲ್ಲಿ ಮದುವೆ ಕಾರ್ಯಕ್ರಮ ನಿಮಿತ್ತ ಡ್ರೋನ್‌ ವಿಡಿಯೋ ಚಿತ್ರೀಕರಣ ನಡೆಸಲಾಗುತ್ತಿತ್ತು. ಡ್ರೋನ್ ಕ್ಯಾಮೆರಾದಲ್ಲಿ‌ ಗಿರಿಯ ವಿಡಿಯೋ ಮಾಡುವಾಗ ಚಿರತೆ ದೃಶ್ಯ ಸೆರೆಯಾಗಿದೆ.

ಬೆಟ್ಟದ ತುದಿಯಲ್ಲಿ ಚಿರತೆ ಇರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹೊಲಗಳಿಗೆ ಕೆಲಸಕ್ಕೆ ತೆರಳಲು ಹೆದರುತ್ತಿದ್ದಾರೆ. ಮೂರು ಚಿರತೆಗಳ ಸೆರೆಹಿಡಿಯಲು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version