Site icon Vistara News

Leopard Spotted : ವೈಟ್‌ಫೀಲ್ಡ್‌ನಲ್ಲಿ ಕಾರಿಗೆ ಅಡ್ಡ ಬಂದ ಚಿರತೆ!

leopard spotted in Bengaluru 1

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಪ್ರದೇಶದಲ್ಲಿ ಮತ್ತೆ ಚಿರತೆ ಭೀತಿ ಶುರುವಾಗಿದೆ. ರಾತ್ರಿ ಸಮಯ ಚಿರತೆ (Leopard attack) ಓಡಾಟವು ಹೆಚ್ಚಾಗಿದ್ದು, ಜೀವ ಭಯವನ್ನು ಹುಟ್ಟುಹಾಕಿದೆ. ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದೆ.

ಬ್ರೂಕ್ ಫೀಲ್ಡ್‌ನ ಎಇಸಿಎಸ್‌ ಲೇಔಟ್ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ವೇಳೆ ಕಾರಿಗೆ ಅಡ್ಡಲಾಗಿ ಚಿರತೆಯೊಂದು ಓಡಿದೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಇಸಿಎಸ್‌ ಲೇಔಟ್‌ನ A ಬ್ಲಾಕ್‌ನಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜನರು ಆತಂಕದಲ್ಲೇ ಓಡಾಡುವಂತಾಗಿದ್ದು, ರಾತ್ರಿ ಸಮಯ ಒಬ್ಬಂಟಿಯಾಗಿ ಓಡಾಡದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಅರಣ್ಯಾಧಿಕಾರಿಗಳು ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ.

ಕಳೆದ 2022ರ ಡಿಸೆಂಬರ್‌ನಲ್ಲೂ ಒಟ್ಟು ನಾಲ್ಕು ಚಿರತೆಗಳು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ಕೆಂಗೇರಿ ಬಳಿಯ ತುರಹಳ್ಳಿ ಫಾರೆಸ್ಟ್ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿರುವುದು, ಬನಶಂಕರಿ, ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಜನತೆಯನ್ನು ಭಯಭೀತಗೊಳಿಸಿತ್ತು.

ಇದನ್ನೂ ಓದಿ: Exam Cheating : ಕಲಬುರಗಿಯಲ್ಲೂ ಪರೀಕ್ಷೆಯಲ್ಲಿ ನಕಲು ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಭ್ಯರ್ಥಿ!

ತಿರುಪತಿಯಲ್ಲಿ ಮತ್ತೆ ಕರಡಿ, ಚಿರತೆ ಪ್ರತ್ಯಕ್ಷ

ತಿರುಪತಿಯಲ್ಲೂ ಮತ್ತೆ ಹೆಚ್ಚಿದ ಚಿರತೆ, ಕರಡಿ ಹಾವಳಿ

ಆಂಧ್ರಪ್ರದೇಶದ ಚಿತ್ತೂರಿನ ತಿರುಪತಿ ಕ್ಷೇತ್ರದಲ್ಲಿ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ. ತಿರುಪತಿಯ ಶ್ರೀ ವಾರು ಮೆಟ್ಟಲು ಬಳಿ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಎರಡು ತಿಂಗಳ ಹಿಂದೆ ಚಿರತೆಯೊಂದು ಮಗುವೊಂದನ್ನು ಬಲಿ ಪಡೆದಿತ್ತು. ಬಳಿಕ ಅರಣ್ಯಾಧಿಕಾರಿಗಳು ಬೋನು ಇಟ್ಟು ಹಲವು ಚಿರತೆ, ಕರಡಿಗಳನ್ನು ಸೆರೆಯಿಡಿದಿದ್ದರು.

ಇದೀಗ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನ ತಿರುಮಲಕ್ಕೆ ಹೋಗುವ ವಾಕ್ವೇನಲ್ಲಿ ಚಿರತೆ ,ಕರಡಿ ಪ್ರತ್ಯಕ್ಷವಾಗಿದೆ. ಚಿರತೆ ಮತ್ತು ಕರಡಿ ವಾಕಿಂಗ್ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ದಾಖಲಾಗಿದೆ. ಹೀಗಾಗಿ ಭಕ್ತರು ಪಾದಯಾತ್ರೆಯಲ್ಲಿ ಜಾಗೃತರಾಗುವಂತೆ ಟಿಟಿಡಿ ಮನವಿ ಮಾಡಿದೆ. ಭಕ್ತರು ಗುಂಪು ಗುಂಪಾಗಿ ತೆರಳಲು ಕೋರಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version