ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು (Leopard spotted) ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
ಚಿರತೆ ಕಾಣಿಸಿಕೊಂಡ ಸುದ್ದಿ ತಿಳಿದ ಅರಸಾಳು ವಲಯ ಅರಣ್ಯ ಅಧಿಕಾರಿಗಳು ಗುರುವಾರ (ಡಿ.೨೨) ಸ್ಥಳ ಪರಿಶೀಲನೆ ನಡೆಸಿ ಚಿರತೆ ಹಿಡಿಯಲು ಗಾಳಿಬೈಲಿನಲ್ಲಿ ಬೋನ್ ಫಿಕ್ಸ್ ಮಾಡಿದ್ದಾರೆ.
ರಿಪ್ಪನ್ ಪೇಟೆ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ. ನಾಲ್ಕು ದಿನಗಳ ಹಿಂದೆ ರಿಪ್ಪನ್ ಪೇಟೆ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಸಮೀಪದ ಮಳವಳ್ಳಿ ಗ್ರಾಮದ ಸಂಪರ್ಕ ರಸ್ತೆಯ ಅರಣ್ಯದಲ್ಲಿ ಚಿರತೆಯು ಒಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಈಗ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿ ಬೈಲ್ ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಸಿ ಮಹೇಶ್ ಉಪ ವಲಯ ಅರಣ್ಯಧಿಕಾರಿ, ಬಸವರಾಜ್ ಬೀಟ್ ಫಾರೆಸ್ಟರ್, ಅನಿಲ್ ರಾಠೋಡ್ ಬೀಟ್ ಫಾರೆಸ್ಟರ್, ಕಾಮನಾಯ್ಕ್ ಬೀಟ್ ಫಾರೆಸ್ಟರ್, ಸಿಬ್ಬಂದಿ ಹಾಲಪ್ಪ, ಯೋಗೇಂದ್ರ, ಸುಧಾಕರ್ ಇನ್ನಿತರರಿದ್ದರು.
ಇದನ್ನೂ ಓದಿ | Coronavirus | ಸಂಸತ್ತಿನಲ್ಲಿ ಮೋದಿ ಸೇರಿ ಹಲವು ಸದಸ್ಯರಿಂದ ಮಾಸ್ಕ್ ಧಾರಣೆ, ಜನರಿಗೂ ಸಂದೇಶ ರವಾನೆ