Site icon Vistara News

Leopard trapped: ನಾಯಿ ಕೊಂದ ಚಿರತೆ ಕೊನೆಗೂ ಸೆರೆ; ಅರಣ್ಯ ಇಲಾಖೆಯ ಆಪರೇಶನ್‌ ಯಶಸ್ವಿ

Leopard falls into cage in Udupi

Leopard falls into cage in Udupi

ಉಡುಪಿ: ಇಲ್ಲಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಬಳಿ‌ ಚಿರತೆಯೊಂದು (Leopard trapped) ಬೋನಿಗೆ ಬಿದ್ದಿದೆ. ಈ ಮೂಲಕ ಆಪರೇಶನ್ ಚಿರತೆ ಕಾರ್ಯಾಚರಣೆಯಲ್ಲಿ 6ನೇ ಚಿರತೆ ಇದಾಗಿದೆ. ಅರೆಬೈಲು ಸತೀಶ ದೇವಾಡಿಗ ಅವರ ಮನೆಯ ಸಾಕು ನಾಯಿ ಮೇಲೆ ಚಿರತೆಯೊಂದು ದಾಳಿ ನಡೆಸಿತ್ತು.

ಚಿರತೆ ಸೆರೆ

ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಾಗೂ ಜನವಸತಿಯಿರುವ ಪ್ರದೇಶದ ಸನಿಹದಲ್ಲೇ ಇರುವ ತೋಪಿನ ಸುತ್ತಮುತ್ತ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಕಾಟ ನಿರಂತರವಾಗಿತ್ತು.

ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದ್ದು ಸಾರ್ವಜನಿಕರು ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ಸೆಪ್ಟಂಬರ್ 8ರಂದು ಈ ಜಾಗದಲ್ಲಿ ಬೋನು ಇರಿಸಿ ಚಿರತೆ ಸೆರೆ ಹಿಡಿದಿದ್ದಾರೆ.

ಬೋನಿಗೆ ಬಿದ್ದ ಚಿರತೆಯನ್ನು ನೋಡಲು ಬಂದ ಸುತ್ತಮುತ್ತಲಿನ ಜನತೆ

ಇದನ್ನೂ ಓದಿ: Bengaluru Theft Case: ಸ್ಕೂಟರ್‌ ಡಿಕ್ಕಿಯಲ್ಲಿಟ್ಟಿದ್ದ ಹಣವನ್ನು ಕೇವಲ 2 ಸೆಕೆಂಡ್‌ನಲ್ಲಿ ಎಗರಿಸಿದ ಕಳ್ಳರು

ಚಿರತೆ ಸೆರೆಯಾದ ಬಳಿಕವೂ ಮಾಲಾಡಿಯಲ್ಲಿ ಆತಂಕ ಕಡಿಮೆಯಾಗಿಲ್ಲ. ಅಲ್ಲದೇ ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದ್ದರೂ ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಮತ್ತೆ ಭಯಭೀತರಾಗಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version