ಶಿರಸಿ: ಗ್ರಂಥಾಲಯದ (Library) ಮಹತ್ವ ಅರಿಯುವ ಜತೆ ಪುಸ್ತಕ (Books reading) ಓದುವ ಹವ್ಯಾಸವನ್ನು ಪ್ರತಿಯೊಬ್ಬರು (Everyone) ಬೆಳೆಸಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.
ನಗರದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಸಂಘದ ಶಿರಸಿ ಘಟಕವು ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಓದು ಶಿಕ್ಷಣ ಜತೆ ಸಂಸ್ಕಾರವನ್ನು ನೀಡುತ್ತದೆ, ಗ್ರಾಮ ಮಟ್ಟದಲ್ಲಿ ಜ್ಞಾನಾರ್ಜನೆ ನೀಡುತ್ತಿರುವ ಗ್ರಂಥಾಲಯಗಳು ಇಂದು ಓದುಗರ ಕೊರತೆಯಿಂದ ಬಳಲುತ್ತಿವೆ. ಗ್ರಂಥಪಾಲಕರು ಸರಿಯಾದ ಸಂಬಳವಿಲ್ಲದೆ ದಿನ ಕಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಗದಿತ ಸಂಬಳ ನೀಡಲು ಕ್ರಮ ವಹಿಸಲಾಗುವುದು. ಗ್ರಾಮೀಣ ಗ್ರಂಥಪಾಲಕರ ಹುದ್ದೆ ಖಾಯಮಾತಿ ಸಂಬಂಧ ಗ್ರಂಥಾಲಯ ಇಲಾಖೆ ಮುಖ್ಯಸ್ಥರ ಬಳಿ ಚರ್ಚಿಸುವುದಾಗಿ ಎಂದರು.
ಇದನ್ನೂ ಓದಿ: Viral News : ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆಗಳು; ಕಾಲುವೆಗೆ ಹಾರಿ ರಕ್ಷಣೆ
ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎನ್.ಹೊಸಮನಿ ಮಾತನಾಡಿ, ಗ್ರಂಥಾಲಯಗಳು ಜ್ಞಾನದ ಗಣಿಯ ಕಿಲೀಕೈ. ಆದರೆ ಇತ್ತೀಚಿನ ವರ್ಷಗಳಲ್ಲಿ ಓದುವ ಅಭಿರುಚಿ ಕಡಿಮೆ ಆಗುತ್ತಿರುವುದು ಶೋಚನೀಯ ಸಂಗತಿ. ಸಾರ್ವಜನಿಕ ಗ್ರಂಥಾಲಯಗಳ ಪರಂಪರೆ ಅವನತಿಯತ್ತ ಸಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನೆಮ್ಮದಿ ಕುಟೀರದ ವಿ.ಪಿ ಹೆಗಡೆ ಮಾತನಾಡಿ, ಗ್ರಂಥಾಲಯಕ್ಕೆ ಸಂಬಂಧಪಟ್ಟ ಇಲಾಖೆಯು ಓದುಗರು ಮೆಚ್ಚುವ ಪುಸ್ತಕಗಳನ್ನು ಪೂರೈಕೆ ಮಾಡುತ್ತಿಲ್ಲ.. ಅದು ಕೇವಲ ತಮ್ಮ ನಿಯಮಾನುಸಾರದ ಪುಸ್ತಕಗಳನ್ನು ಪೂರೈಕೆ ಮಾಡುತ್ತಿದೆ ಎಂದರು.
ಇದನ್ನೂ ಓದಿ: Electric Shock : ವಿದ್ಯುತ್ ದುರಂತಕ್ಕೆ ಒಂದೇ ಕುಟುಂಬದ ಮೂವರು ಬಲಿ; ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ
ಇಂದಿನ ಕಾಲಘಟ್ಟದಲ್ಲಿ ಯುವ ಸಮೂಹದಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಸಾಮಾಜಿಕ ತಾಣಗಳಲ್ಲೇ ತಮ್ಮನ್ನು ತೊಡಗಿಸಿಕೊಳ್ಳೊ ಯುವ ಜನತೆ ಪುಸ್ತಕ ಓದುವುದನ್ನು ಮರೆತಿದ್ದಾರೆ. ಇನ್ನು ಪುಸ್ತಕ ಓದುಗರಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಯುವ ಜನತೆ ಗ್ರಂಥಾಲಯದತ್ತ ಮುಖ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಗ್ರಂಥಾಲಯದ ನಿವೃತ್ತ ಸಿಬ್ಬಂದಿ ಮಧುಕರ ಹೆಗಡೆ ದಂಪತಿ ಅವರನ್ನು ಹಾಗೂ ಧನಂಜಯ ಹೆಗಡೆ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಇದನ್ನೂ ಓದಿ: Tirupati Temple: ಚಿರತೆ ದಾಳಿಗೆ ಬಾಲಕಿ ಬಲಿ; ತಿರುಮಲ ಮೆಟ್ಟಿಲು ಭಕ್ತರಿಗೆ ಸೇಫ್ ಅಲ್ಲ!
ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರ ಮಾದರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಆಡಳಿತಾಧಿಕಾರಿ ಬಿ.ಪಿ.ಸತೀಶ, ಇಒ ಸತೀಶ ಹೆಗಡೆ, ಪ್ರಮುಖರಾದ ನಾಗರಾಜ ನಾಯ್ಕ, ರಾಮಮೂರ್ತಿ ವಿ.ವೈ, ಸುಬ್ರಾಯ ಭಟ್ ಇತರರಿದ್ದರು.