1. ಜಾತಿ ಗಣತಿಗೆ ಲಿಂಗಾಯತರ ಪಕ್ಷಾತೀತ ವಿರೋಧ; ತಪ್ಪು ವರದಿ ಪ್ರಕಟಿಸಿದ್ರೆ ಜನ ಬುದ್ಧಿ ಕಲಿಸ್ತಾರೆ; ನಿರಾಣಿ
ಬಾಗಲಕೋಟೆ: ಜಾತಿ ಗಣತಿಗೆ (Caste Census) ಸಂಬಂಧಿಸಿ ಕಾಂತರಾಜು ವರದಿಯನ್ನು (Kantharaju report) ಸ್ವೀಕರಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಹಿನ್ನಡೆಯಾಗಲಿದೆ ಎಂದು ಹಿರಿಯ ವೀರಶೈವ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಎಚ್ಚರಿಕೆ ನೀಡಿದ ಬೆನ್ನಲ್ಲೇ ಈಗ ಮಾಜಿ ಸಚಿವ ಮುರುಗೇಶ ನಿರಾಣಿ (Murugesh Nirani) ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ರಾಜ್ಯದ 7 ಕೋಟಿ ಜನರಲ್ಲಿ 26% ವೀರಶೈವ ಸಮಾಜ ಇದೆ. ಅಂದರೆ, 1 ಕೋಟಿ 30 ಲಕ್ಷ ಜನರಿದ್ದಾರೆ. ಅವರು ತೋರಿಸುತ್ತಿರುವುದು ಕೇವಲ 60 ಲಕ್ಷ ಮಂದಿ ಇದ್ದಾರೆ ಎಂಬುದನ್ನು ಮಾತ್ರ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಮೂಲಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದೀಗ ಜಾತಿಗಣತಿ ವರದಿ ವಿರುದ್ಧ ಲಿಂಗಾಯತ ಸಮಾಜದವರು ಪಕ್ಷಾತೀತವಾಗಿ ಒಟ್ಟಾಗುತ್ತಿದ್ದು, ಈಗ ಮುರುಗೇಶ್ ನಿರಾಣಿ ಕೈಜೋಡಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
2. ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!
ರಾಮನಗರ: ದೇಶದ – ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ – ಬಿಜೆಪಿ (BJP JDS Alliance) ಮೈತ್ರಿಯಾಗಿದೆ. ಹಾಗಾಗಿ ಇವತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamay) ಅವರನ್ನು ಭೇಟಿ ಮಾಡಿದ್ದೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ತಯಾರಿ ಬಗ್ಗೆ ಮಾತನಾಡಲ್ಲ. ಅದು ನಾಲ್ಕು ಗೋಡೆ ಮಧ್ಯೆ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಇರುವ ಏಕೈಕ ಸಂಸದನೂ (ಡಿ.ಕೆ. ಸುರೇಶ್) ಇರಬಾರದು ಎಂದು ಜನ ನಿರ್ಧಾರ ಮಾಡುತ್ತಾರೆ. 28ಕ್ಕೆ 28 ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಗೆಲ್ಲಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಹೇಳಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ಬೆಂಗಳೂರಿನಲ್ಲಿ ಕಳೆಗಟ್ಟಿದ ಕಂಬಳದ ವೈಭವ: ಸಂಜೆ ಮ್ಯೂಸಿಕ್ ಬೀಟ್, ವಿಜೇತರಿಗೆ ಬಹುಮಾನ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್ ಹಬ್ಬವಾಗಿ ಬೆಂಗಳೂರು ಕಂಬಳ ಕಳೆಕಟ್ಟಿಕೊಟ್ಟಿದೆ. ಎಲ್ಲಿ ನೋಡಿದರೂ ಜನವೇ ಜನ. ಕರಾವಳಿಯ ಸಾಂಪ್ರದಾಯಿಕ ಕಲೆಗೆ (Traditional art of the coastal Karnataka) ಬೆಂಗಳೂರಿಗರು ಅಕ್ಷರಶಃ ಮಾರು ಹೋಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಸಾಗರವೇ ಸೇರಿದೆ. ಬೆಂಗಳೂರು ಕಂಬಳದ (Bangalore Kambala) ಉತ್ಸವಕ್ಕೆ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಲ್ಲಿರುವ ತುಳುನಾಡಿನ ಬಹುತೇಕ ಮಂದಿ ಇದು ನಮ್ಮ ಹಬ್ಬ ಎಂಬಂತೆ ಭೇಟಿ ನೀಡುತ್ತಿದ್ದಾರೆ. ಕೋಣಗಳ ಓಟವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಖಾದ್ಯಗಳನ್ನು ಸವಿದು ಆನಂದಿಸುತ್ತಿದ್ದಾರೆ. ಬೆಂಗಳೂರಿನಲ್ಲಿದ್ದುಕೊಂಡೇ ಕಂಬಳದ ಅಲೆಯಲ್ಲಿ ಒಮ್ಮೆ ಕರಾವಳಿಗೆ ಹೋಗಿ ಬಂದಿದ್ದಾರೆ! ಎರಡನೇ ದಿನವಾದ ಭಾನುವಾರವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿರುವುದು ಕಂಬಳದ ಸಂಭ್ರಮವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Bangalore Kambala: ಬೆಂಗಳೂರು ಕಂಬಳಕ್ಕೆ ರಕ್ಷಿತ್ ಶೆಟ್ಟಿ ಸಪೋರ್ಟ್; ತಾರೆಯರ ಸಮಾಗಮ!
4. ಭ್ರೂಣ ಹತ್ಯೆ ಮಾಡಿದ್ರೆ ಕಠಿಣ ಶಿಕ್ಷೆ: ಸಿಎಂ ಎಚ್ಚರಿಕೆ
ಬೆಂಗಳೂರು: ಭ್ರೂಣ ಹತ್ಯೆ ಪ್ರಕರಣಗಳಲ್ಲಿ (Foeticide Case) ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಕೂಡ ಅವರಿಗೆ ಶಿಕ್ಷೆಯಾಗುತ್ತದೆ. ಈ ಬಗ್ಗೆ ಒಂದು ಸಭೆ ಮಾಡಿ ಸೂಕ್ತ ಕ್ರಮದ ನಿರ್ಣಯ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಡೆಡ್ಲಿ ಚೀನಾ ವೈರಸ್; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?
ಬೆಂಗಳೂರು: ನವೆಂಬರ್ ತಿಂಗಳು ಬಂದರೆ ಮೈ ನಡುಗಿಸುವ ಚಳಿಯು ಜನರ ಆರೋಗ್ಯದಲ್ಲಿ ಏರುಪೇರಾಗಿಸುತ್ತದೆ. ಎಷ್ಟೇ ಗಟ್ಟಿಮುಟ್ಟಾಗಿದ್ದವರಿಗೂ ಕೆಮ್ಮು, ನೆಗಡಿ, ಶೀತ ಕಾಡಲು ಆರಂಭವಾಗುತ್ತದೆ. ಒಂದೆರಡು ದಿನ ಮಾತ್ರೆ ನುಗ್ಗಿ, ಸಿರಪ್ ಕುಡಿದರೆ ಸರಿಹೋಗುತ್ತೆ ಎಂದು ಗೂಗಲ್ ಸರ್ಚ್ ಮಾಡಿ ಔಷಧ ತಗೊಂಡರೆ, ಎಡವಟ್ಟು ಆಗುವುದು ಗ್ಯಾರೆಂಟಿ. ಯಾಕಂದರೆ ನಗರದಲ್ಲಿ ಡೆಂಗ್ಯೂ ಜತೆ ಜತೆಯಲ್ಲೇ ಶೀತಜ್ವರದ (Influenza) ಮಾದರಿಯ ಕಾಯಿಲೆ (Viral fever) ಹೆಚ್ಚಾಗುತ್ತಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6.ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 44 ರನ್ ಜಯ, ಸರಣಿಯಲ್ಲಿ 2-0 ಮುನ್ನಡೆ
ತಿರುವನಂತಪುರ: ಯಶಸ್ವಿ ಜೈಸ್ವಾಲ್ (53 ರನ್, 25 ಎಸೆತ, 9ಫೋರ್, 2 ಸಿಕ್ಸರ್) , ಋತುರಾಜ್ ಗಾಯಕ್ವಾಡ್ (58 ರನ್, 43 ಎಸೆತ, 3 ಫೋರ್, 2 ಸಿಕ್ಸರ್), ಇಶಾನ್ ಕಿಶನ್ (52 ರನ್, 32 ಎಸೆತ, 3 ಫೋರ್, 4 ಸಿಕ್ಸರ್) ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಭಾರತ ತಂಡದ ಆಸ್ಟ್ರೇಲಿಯಾ (ind vs Aus ) ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 44 ರನ್ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿ ಇಲ್ಲಿದೆ
ಬೆಂಗಳೂರು: ನವೆಂಬರ್ 26ರಂದು ಐಪಿಎಲ್ ಫ್ರಾಂಚೈಸಿಗಳಿಗೆ ತನ್ನ ತಂಡದಿಂದ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಅಂತಿಮ ದಿನವಾಗಿತ್ತು. ಅಂತೆಯೇ ಎಲ್ಲ ಹತ್ತು ತಂಡಗಳು ತನ್ನ ಪಟ್ಟಿ ಬಿಡುಗಡೆ ಮಾಡಿದೆ. ಉಳಿಸಿಕೊಂಡಿರುವವರ ಹಾಗೂ ಬಿಡುಗಡೆ ಮಾಡಿರುವವರ ಹೆಸರನ್ನು ಪ್ರಕಟಿಸಿದೆ ಬೆನ್ ಸ್ಟೋಕ್ಸ್, ಜೋ ರೂಟ್, ರಿಲೀ ರೊಸ್ಸೌ ಮತ್ತು ಭಾನುಕಾ ರಾಜಪಕ್ಸೆ ಸೇರಿದಂತೆ ಹಲವಾರು ಪ್ರಮುಖ ಆಟಗಾರರು ಬಿಡುಗಡೆಗೊಂಡಿರುವ ಅಟಗಾರರ ಪಟ್ಟಿಯಲ್ಲಿದ್ದಾರೆ. ಐಪಿಎಲ್ 2024ರ (IPL 2024) ಹರಾಜಿಗೆ ಮುಂಚಿತವಾಗಿ ಎಲ್ಲ ಹತ್ತು ತಂಡಗಳು ಪ್ರಕಟಿಸಿರುವ ಆಟಗಾರ ಪಟ್ಟಿಯು ಈ ಕೆಳಗಿನಂತಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : IPL 2024 : ಪ್ರಮುಖ ಬೌಲರ್ನನ್ನೇ ತಂಡದಿಂದ ಬಿಡುಗಡೆಗೊಳಿಸಿದ ಆರ್ಸಿಬಿ
8. ಮನ್ ಕೀ ಬಾತ್‌ನಲ್ಲಿ ಚಾಮರಾಜನಗರದ ವರ್ಷಾ ಎಂಬ ಮಹಿಳೆಯ ನೆನೆದ ಮೋದಿ; ಏನಿವರ ಸಾಧನೆ?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ (Mann Ki Baat) ಸರಣಿಯ 107ನೇ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ದೇಶದ ಹಲವು ವಿಚಾರಗಳ ಕುರಿತು ಮಾತನಾಡಿದ ನರೇಂದ್ರ ಮೋದಿ (Narendra Modi), ಚಾಮರಾಜನಗರ ಜಿಲ್ಲೆಯ (Chamarajanagar District) ವರ್ಷಾ (Varsha) ಎಂಬ ಮಹಿಳೆಯನ್ನೂ ಸ್ಮರಿಸಿದರು. ಮನ್ ಕೀ ಬಾತ್ ಕಾರ್ಯಕ್ರಮವು ಹೇಗೆ ಜನರ ಜೀವನದಲ್ಲಿ ಬದಲಾವಣೆ ತರುತ್ತಿದೆ, ಜನ ಹೇಗೆ ಸ್ಫೂರ್ತಿಗೊಂಡು ಹಲವು ಕೆಲಸಗಳಲ್ಲಿ ತೊಡಗಿದ್ದಾರೆ ಎಂಬುದನ್ನು ತಿಳಿಸುವಾಗ ಮೋದಿ ಅವರು ವರ್ಷಾ ಅವರನ್ನು ಉದಾಹರಣೆಯಾಗಿ ನೀಡಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Modi Security Breach: ಮೋದಿ ಭದ್ರತಾ ವೈಫಲ್ಯ; ಪಂಜಾಬ್‌ನ 7 ಪೊಲೀಸರ ತಲೆದಂಡ!
9. ಬಾಂಗ್ಲಾ ವಲಸಿಗರಿಗೆ ವೋಟರ್ ಐಡಿಯ ಭರವಸೆ ನೀಡಿದ ಟಿಎಂಸಿ ನಾಯಕಿ, ಭುಗಿಲೆದ್ದ ವಿವಾದ
ಕೋಲ್ಕೊತಾ: ಯಾವುದೇ ಪಕ್ಷದ ನಾಯಕರಿರಲಿ, ನಾಯಕಿಯರಿರಲಿ, ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಹಲವು ಉಚಿತ ಕೊಡುಗೆಗಳು, ರಸ್ತೆ, ವಿದ್ಯುತ್, ಉದ್ಯೋಗ, ಕೃಷಿಗೆ ನೀರಾವರಿ ಸೇರಿ ಹಲವು ವಿವಿಧ ಭರವಸೆಗಳನ್ನು ನೀಡುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ (West Bengal) ರತ್ನಾ ವಿಶ್ವಾಸ್ (Ratna Biswas) ಎಂಬ ಟಿಎಂಸಿ ನಾಯಕಿಯು, “2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಲಸಿಗರಿಗೂ ಮತದಾರರ ಗುರುತಿನ ಚೀಟಿ ನೀಡಲಾಗುವುದು” ಎಂದು ಹೇಳಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಜಗತ್ತಿನ ಅತ್ಯಂತ ಕಠಿಣ ಉದ್ಯೋಗ ಯಾವುದು? ಈ ವಿಡಿಯೊ ನೋಡಿ!
ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ಕಠಿಣ, ಅಪಾಯಕಾರಿ ಉದ್ಯೋಗ (Most Difficult Job) ಯಾವುದು ಎನ್ನುವ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು. ನಿಮ್ಮ ಮನಸ್ಸಲ್ಲೂ ಥಟ್ಟನೆ ಕೆಲವೊಂದು ಸವಾಲು ಎನಿಸುವ ಉದ್ಯೋಗದ ಚಿತ್ರ ಮೂಡಿರಬಹುದು. ಆದರೆ ಈ ವಿಡಿಯೊ ನೋಡಿದ ಬಳಿಕ ನಿಮ್ಮ ಅಭಿಪ್ರಾಯ ಬದಲಾಗಬಹುದು. ಇದುವೇ ಅತ್ಯಂತ ಸವಾಲಿನ ಕೆಲಸ ಎನ್ನುವ ತೀರ್ಮಾನಕ್ಕೆ ನೀವು ಬರಲೂಬಹುದು. ಹೌದು, ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ (Viral video). ಅಷ್ಟಕ್ಕೂ ಈ ವಿಡಿಯೊದಲ್ಲಿ ಏನಿದೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.