Site icon Vistara News

Lion Safari: ತ್ಯಾವರೆಕೊಪ್ಪದಲ್ಲಿ 11 ವರ್ಷದ ಸಿಂಹ ಯಶವಂತ ಸಾವು!

ಶಿವಮೊಗ್ಗ: ತ್ಯಾವರೆಕೊಪ್ಪ ಹತ್ತಿರದ ಸಿಂಹ ಧಾಮದ “ಲಯನ್​ ಸಫಾರಿ”ಯಲ್ಲಿ ಸಿಂಹ ಯಶವಂತ ಮೃತಪಟ್ಟಿದೆ. ಯಶವಂತನಿಗೆ 11 ವರ್ಷ ವಯಸ್ಸಾಗಿತ್ತು.

ಪ್ರೋಟೋಸ್​ವೊನ್​ ಡಿಸೀಸ್​ನಿಂದ ಬಳಲುತ್ತಿದ್ದ ಯಶವಂತ, ಪ್ಲೇಟ್​ಲೆಟ್‌​ ಕೊರೆತೆಯಿಂದಾಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅರಣ್ಯ ಅಧಿಕಾರಿಗಳು 10 ತಿಂಗಳ ಹಿಂದಷ್ಟೆ ಬನ್ನೇರುಘಟ್ಟದಿಂದ ಯಶವಂತನನ್ನು ಕರೆತರಲಾಗಿತ್ತು. ಆತನನ್ನು ಕಳೆದುಕೊಂಡಿರುವುದು ಸಿಂಹ ಧಾಮಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.

ಇನ್ನು ಯಶವಂತನಿಗಿಂಗ ಮೊದಲು ಲಯನ್ ​ಸಫಾರಿಯಲ್ಲಿ ಇನ್ನೊಂದು ಹುಲಿ ಮೃತಪಟ್ಟಿತ್ತು. ಪ್ರಸ್ತುತ ಸಿಂಹಧಾಮದಲ್ಲಿ ನಾಲ್ಕು ಸಿಂಹಗಳು ಉಳಿದಂತಾಗಿದೆ.

ಇದನ್ನೂ ಓದಿ| Viral Video: ಎರಡು ಹುಲಿಗಳ ಜಾಲಿ ಮೂಡ್‌ ಆಟ; ಕಣ್ಣಿಗೆ ಹಬ್ಬವೆಂದ ನೆಟ್ಟಿಗರು

Exit mobile version