ಗಂಗಾವತಿ: ಲೋಕಸಭಾ ಚುನಾವಣೆ 2024 (Lok Sabha Election 2024) ಹಿನ್ನೆಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಮತದಾನದ ಮಹತ್ವ ಅರಿತಿರುವ ದಂಪತಿ, ದುಬೈನಿಂದ (Dubai) ಗಂಗಾವತಿಗೆ ಮತದಾನಕ್ಕಾಗಿ ಆಗಮಿಸಿದ್ದಾರೆ.
ನಗರದ ಎಪಿಎಂಸಿ ಸಮೀಪದ ನಿವಾಸಿಯಾಗಿರುವ ಉದ್ಯಮಿ ಆರ್ಹಾಳ ಶರಣಪ್ಪ ಅವರ ಪುತ್ರಿ ಐಶ್ವರ್ಯ ಗೌಡರ್ ಮತ್ತು ಅಳಿಯ ಕಿರಣ್ ಪಾಟೀಲ್ ದಂಪತಿ ದುಬೈನಲ್ಲಿ ನೆಲೆಸಿದ್ದಾರೆ. ಲೋಕಸಭಾ ಚುನಾವಣೆಗೆ ಮತದಾನ ಮಾಡುವ ಉದ್ದೇಶಕ್ಕಾಗಿಯೇ ದುಬೈನಿಂದ ಗಂಗಾವತಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ: CISCE Results 2024: ಸಿಐಎಸ್‌ಸಿಇಯ 10 & 12ನೇ ತರಗತಿಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ
ಕಿರಣ್ ಪಾಟೀಲ್ ಕೂಡ ಗಂಗಾವತಿಯ ಕುವೆಂಪು ಬಡಾವಣೆಯ ನಿವಾಸಿಯಾಗಿದ್ದು, ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ ನೆಲೆಸಿದ್ದಾರೆ. ಕಳೆದ ಡಿಸಂಬರ್‌ನಲ್ಲಿ ಐಶ್ವರ್ಯ ಮತ್ತು ಕಿರಣ್ ಪಾಟೀಲ್‌ಗೆ ವಿವಾಹವಾಗಿದ್ದು, ಇಬ್ಬರೂ ದುಬೈನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಲ್ಲಿನ ಎಪಿಎಂಸಿ ಮುಂಭಾಗದ ಟಿಎಪಿಸಿಎಂಎಸ್‌ನ ಮತಗಟ್ಟೆಯಲ್ಲಿ ಐಶ್ವರ್ಯ ಮತದಾನ ಮಾಡಲಿದ್ದು, ಬೆಂಡರವಾಡಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಕಿರಣ್ ಪಾಟೀಲ್ ಮತದಾನ ಮಾಡಲಿದ್ದಾರೆ. ಮತದಾನದ ಬಳಿಕ ಈ ದಂಪತಿ ಮತ್ತೆ ದುಬೈಗೆ ತೆರಳಲಿದ್ದಾರೆ.
ಇದನ್ನೂ ಓದಿ: No Diet Day 2024: ಇಂದು ಡಯೆಟ್ ರಹಿತ ದಿನ ಆಚರಿಸುವುದೇಕೆ?
`ಭಾರತ ಬದಲಾಗುತ್ತಿದ್ದು, ಅಭಿವೃದ್ಧಿಗೆ ವೇಗ ಸಿಕ್ಕಿದೆ. ವಿದೇಶಗಳಲ್ಲೂ ಭಾರತದ ಬಗ್ಗೆ ಗೌರವ ಭಾವ ಮೂಡಿದೆ. ಹೀಗಾಗಿ ಭಾರತದ ಪ್ರಜೆಗಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತಿದೆ. ಭಾರತದ ಪೌರರಾಗಿ ಮತದಾನ ಮಾಡಲು ಬಂದಿದ್ದಾಗಿ ಐಶ್ವರ್ಯ ಮತ್ತು ಕಿರಣ್ ದಂಪತಿ ತಿಳಿಸಿದ್ದಾರೆ.