ಗಂಗಾವತಿ: ನಗರದ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಬುಧವಾರ ನಡೆದ ಮದುವೆ ಆರತಕ್ಷತೆಯಲ್ಲಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರು, ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ (Lok Sabha Election 2024) ಮತದಾನದ ಬಗ್ಗೆ ಜಾಗೃತಿ (Voting Awareness) ಮೂಡಿಸಿ ಗಮನ ಸೆಳೆದರು.
ನಗರಸಭೆ ಮಾಜಿ ಸದಸ್ಯ ಬಿ. ಅಶೋಕ್ ಟೈಗರ್ ಅವರ ಪುತ್ರಿ ಐಶ್ವರ್ಯ ಅವರ ವಿವಾಹವು ಆದೋನಿಯ ವೀರಾಂಜನೇಯ ಜತೆ ನಡೆದಿದ್ದು, ಇಲ್ಲಿನ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಆರತಕ್ಷತೆಯಲ್ಲಿ ನೂತನ ವಧು-ವರರು ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: Samsung: ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ 2ನೇ ಆವೃತ್ತಿ ಪ್ರಾರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ
ನಮ್ಮ ದೇಶದ ಭವಿಷ್ಯವು ಮತದಾನದಲ್ಲಿ ಅಡಗಿದೆ, ದೇಶದ ನಿಜವಾದ ಪ್ರಜೆಯಾಗಿ ಮತಚಲಾಯಿಸಿ, ನಿಮ್ಮ ಮತ, ನಿಮ್ಮ ಧ್ವನಿ ಎಂಬಿತ್ಯಾದಿ ಫಲಕಗಳನ್ನು ಹಿಡಿದು ಮದುವೆ ಆರತಕ್ಷತೆಗೆ ಬಂದಿದ್ದ ಆಪ್ತರು, ಹಿತೈಷಿಗಳು, ಬಂಧು-ಬಳಗ, ಸ್ನೇಹಿತರಿಗೆ ಜಾಗೃತಿ ಮೂಡಿಸಲಾಯಿತು.
ಇದನ್ನೂ ಓದಿ: DC vs GT: ಕೊಹ್ಲಿಯಂತೆ ಅದ್ಭುತ ಫೀಲ್ಡಿಂಗ್ ನಡೆಸಿ ಡೆಲ್ಲಿಗೆ ಗೆಲುವು ತಂದ ಟ್ರಿಸ್ಟಾನ್ ಸ್ಟಬ್ಸ್
ಕೊಪ್ಪಳ ಜಿಲ್ಲಾ ಮತದಾನ ಜಾಗೃತಿ ರಾಯಭಾರಿ ಡಾ. ಶಿವಕುಮಾರ್ ಮಾಲಿಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡಹಬ್ಬ ಚುನಾವಣೆ. ಹಬ್ಬದಲ್ಲಿ ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ನಿಭಾಯಿಸಬೇಕು. ಪ್ರತಿಯೊಬ್ಬ ಅರ್ಹ ಮತದಾರರರು ತಪ್ಪದೇ ಮತ ಚಲಾಯಿಸಬೇಕು ಎಂದು ತಿಳಿಸಿದರು.