ಕೊಪ್ಪಳ: ಫಾರ್ಮ್ ನಂಬರ್ 9 ನೀಡಲು ಲಂಚ ಬೇಡಿಕೆ (Demand) ಇಟ್ಟ ಪಿಡಿಒ ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಟಪರ್ವಿ ಗ್ರಾಮದ ಗವಿಸಿದ್ದಪ್ಪ ಉಸಗಲಿ ಎಂಬುವವರು ತಮ್ಮ ಮನೆಯ ಫಾರ್ಮ್ ನಂಬರ್ 9 ನೀಡಲು ನೆಲಜೇರಿ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಫಾರ್ಮ್ ನಂಬರ್ 9 ನೀಡಲು ನೆಲಜೇರಿ ಪಿಡಿಒ ಆನಂದ ಎಲಿಗಾರ ಎಂಬುವವರು ಲಂಚ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಗವಿಸಿದ್ದಪ್ಪ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇದನ್ನೂ ಓದಿ: Karnataka Election : ಕಾಂಗ್ರೆಸ್ ಕೈ ಖಾಲಿಯಾಗಿದೆ, ಪ್ರಿಯಾಂಕ ಗಾಂಧಿ ಕೈಯಲ್ಲಿರುವುದೂ ದೋಸೆ ಮಾತ್ರ ಅಂದ ಅಣ್ಣಾಮಲೈ
ಪಿಡಿಒ ಸೂಚನೆಯ ಮೇರೆಗೆ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್ ವಿಠ್ಠಲ್ ವೀರಣ್ಣಶೆಟ್ಟಿ ಕುದರಿಮೋತಿ ಗ್ರಾಮ ಪಂಚಾಯಿತಿಯಲ್ಲಿ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.