ಸೊರಬ: ಪಟ್ಟಣದ ಪುರಸಭೆಯಲ್ಲಿ ಕಂದಾಯ ವಿಭಾಗದ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಲಾ ಖಾತೆ ಬದಲಾವಣೆಗೆ 15 ಸಾವಿರ ಲಂಚ (Bribe) ಸ್ವೀಕರಿಸುವಾಗ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಪುರಸಭೆ ವ್ಯಾಪ್ತಿಗೆ ಒಳಪಡುವ ಹೊಸಪೇಟೆ ಬಡಾವಣೆಯ ಸರ್ವೆ 179ರಲ್ಲಿನ ನಿವೇಶನವನ್ನು ಭಾಸ್ಕರ ಶೆಟ್ಟಿ ಎಂಬುವವರು ಖರೀದಿ ಮಾಡಿದ್ದರು. ಈ ಬಗ್ಗೆ ಖಾತೆ ಬದಲಾವಣೆಗೆ ಜೂ. 17ರಂದು ಅರ್ಜಿಸಲ್ಲಿಸಿದ್ದರು. ಖಾತೆ ಬದಲಾವಣೆಗೆ ಚಂದ್ರಕಲಾ 15 ಸಾವಿರ ರೂ., ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಭಾಸ್ಕರ ಶೆಟ್ಟಿ ಅವರು ಬೆಂಗಳೂರಿನಲ್ಲಿ ವಾಸವಿದ್ದ ಹಿನ್ನೆಲೆ ಅವರ ಸಹೋದರ ಮಂಜುನಾಥ ಅವರು ದಾಖಲೆಗಳನ್ನು ಕ್ರೂಢಿಕರಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಇದನ್ನೂ ಓದಿ: Puneeth Rajkumar: ಶ್ರೀರಂಗಪಟ್ಟಣದಲ್ಲಿ ಅಪ್ಪು ಅಭಿಮಾನಿಗಳ ʼಗಂಧದ ಗುಡಿʼ ಹೋಟೆಲ್ ಶುರು
ಈ ಹಿಂದೆ ಜೂ.21ರಂದು ಕಚೇರಿಗೆ ಆಗಮಿಸಿದ ವೇಳೆ ಖಾತೆ ಬದಲಾವಣೆಗೆ 15 ಸಾವಿರ ರೂ., ನೀಡುವಂತೆ ಬೇಡಿಕೆ ಇಟ್ಟಿರುವ ಕುರಿತು ಮಂಜುನಾಥ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರು ಚಂದ್ರಕಲಾ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Road Accident : ನಾಳೆ ಇಬ್ಬರು ಹೆಣ್ಣುಮಕ್ಕಳ ಮದುವೆ ಇತ್ತು; ಇವತ್ತು ಅಪಘಾತದಲ್ಲಿ ಅಪ್ಪನೇ ಇಲ್ಲವಾದರು!
ಲೋಕಾಯುಕ್ತ ಡಿವೈಎಸ್‍ಪಿ ಉಮೇಶ್ ಈಶ್ವರನಾಯ್ಕ್ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಇನ್ಸ್‍ಫೆಕ್ಟರ್ ರಾಧಾಕೃಷ್ಣ, ಸಿಬ್ಬಂದಿ ಪ್ರಶಾಂತ್, ಪ್ರಸನ್ನ ಸೇರಿದಂತೆ ಇತರರು ಪಾಲ್ಗೊಂಡಿದ್ದರು.