ಕೊಪ್ಪಳ: ಹೋಂ ಗಾರ್ಡ್ ಒಬ್ಬರ ಸ್ಥಳ ವರ್ಗಾವಣೆಗೆ 6 ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ (Lokayukta Raid) ಗೃಹರಕ್ಷಕ ದಳದ ಕೊಪ್ಪಳ ಜಿಲ್ಲಾ ಕಮಾಂಡೆಂಟ್ ಹಾಗೂ ಮಧ್ಯವರ್ತಿಯಾಗಿರುವ ತಾಲೂಕು ಕಮಾಂಡೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಗವಿಸಿದ್ದಪ್ಪ ಪೂಜಾರ ಹಾಗೂ ತಾಲೂಕು ಕಮಾಂಡೆಂಟ್ ರುದ್ರಪ್ಪ ಪತ್ತಾರ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೊಪ್ಪಳ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚನಕಾಗಿ ಗವಿಸಿದ್ದಪ್ಪ ಕಾರ್ಯನಿರ್ವಹಿಸುತ್ತಾರೆ.
ಮೆಹಬೂಬ್ ಬಾಷಾ ಎನ್ನುವ ಹೋಂ ಗಾರ್ಡ್ ಕೊಪ್ಪಳ ತಾಲೂಕಿನ ಮುನಿರಾಬಾದ್‌ನಿಂದ ಗಂಗಾವತಿಗೆ ವರ್ಗಾವಣೆ ಕೇಳಿದ್ದರು. ಸ್ಥಳ ವರ್ಗಾವಣೆಗೆ ಕಮಾಂಡೆಂಟ್ 10 ಸಾವಿರ ರೂಪಾಯಿ ಲಂಚ ಕೇಳಿದ್ದರು. ಮಂಗಳವಾರ 6 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಜಿಲ್ಲಾ ಕಮಾಂಡೆಂಟ್ ಗವಿಸಿದ್ದಪ್ಪ ಹಾಗೂ ಮಧ್ಯವರ್ತಿಯಾಗಿರುವ ತಾಲೂಕು ಕಮಾಂಡೆಂಟ್ ಸಿಕ್ಕಿಬಿದ್ದಿದ್ದಾರೆ. ಡಿವೈಎಸ್ಪಿ ಸಲೀಂ ಪಾಷಾ, ಇನ್ಸಪೆಕ್ಟರ್ ಚಂದ್ರಪ್ಪ ಇಟಿ, ರಾಜೇಶ್ ಭಟಕುರಕಿ, ಗಿರೀಶ್ ರೋಡಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ | Brave hunt : ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಪರಾರಿ; ತಡೆಯಲು ಹೋದ 70ರ ವೃದ್ಧನನ್ನು ರಸ್ತೆಯಲ್ಲಿ ಒಂದೂವರೆ ಕಿ.ಮೀ. ದರದರನೆ ಎಳೆದೊಯ್ದ!