ಮಂಗಳೂರು: ಜನವರಿ 28 ಮತ್ತು 29 ರಂದು ಮಂಗಳೂರಿನಲ್ಲಿ ರಾಜ್ಯ ಮಟ್ಟದ 19ನೇ ‘ನಗೆ ಸಮ್ಮೇಳನ’ (LAUGHCON 2023) ನಡೆಯಲಿದೆ. ನಗರದ ಕೊಡಿಯಾಲಬೈಲ್‌ನ ಪಿ.ವಿ.ಎಸ್. ಕಲಾಕುಂಜ ರಸ್ತೆಯ ಶಾರದಾ ವಿದ್ಯಾಲಯ ಹಿಂಭಾಗದ ಕೂಟಕ್ಕಳ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ನಗೆಯೋಗ ಕೂಟಗಳ ಒಕ್ಕೂಟದ ವತಿಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಹಾಗೂ ವರದ ಇನ್ನೋವೇಶನ್ಸ್ ಸಹಯೋಗ ನೀಡಿದೆ.
ಜ.28ರಂದು ಬೆಳಗ್ಗೆ 12 ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ಓಂಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ರಾಜೇಶ್ ಬಂಗೇರ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ನಗೆ ಕೂಟಗಳ ಅಧ್ಯಕ್ಷ ಪ್ರೊ.ಪಿ.ಸದಾಶಿವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್, ಗೌರವಾನ್ವಿತ ಆಹ್ವಾನಿತರಾಗಿ ಆಧ್ಯಾತ್ಮಿಕ ಉಪನ್ಯಾಸಕಿ ಶೋಭಾ ಮಯ್ಯ, ಬೆಂಗಳೂರಿನ ಆರ್.ವಿ. ಟ್ರೈನಿಂಗ್ ಅಕಾಡೆಮಿಯ ಐಎಎಸ್ ಮತ್ತು ಯುಪಿಎಸ್‌ಸಿ ಪರೀಕ್ಷೆಗಳ ತರಬೇತುದಾರರಾದ ಪ್ರೊ.ಎಂ.ಸಿದ್ಧಾನಂದ, ಖ್ಯಾತ ಹಾಸ್ಯ ಭಾಷಣಕಾರ ಕೋಗಿಲು ಕೊಟ್ರೇಶ್ ಭಾಗವಹಿಸಲಿದ್ದಾರೆ.
ಜ.೨೯ರಂದು ಬೆಳಗ್ಗೆ 8 ಗಂಟೆಗೆ ನಗೆ ಮಹಾ ಮೆರವಣಿಗೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾನಂದ್ ಅಂಚನ್ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ನಗೆ ಕೂಟಗಳ ಒಕ್ಕೂಟದ ಅಧ್ಯಕ್ಷ ಪನ್ನಗ ಶಯನಂ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಎನ್.ಎನ್. ಭಾಸ್ಕರ್, ಸಹಾಯಕ ಕಮಿಷನರ್ ಎಚ್.ಕೆ.ಕೃಷ್ಣಮೂರ್ತಿ, ವಿಶೇಷ ಅತಿಥಿಗಳಾಗಿ ಖ್ಯಾತ ವೈದ್ಯಕೀಯ ಲೇಖಕ ಡಾ. ಮುರಳಿ ಮೋಹನ ಚೂಂತಾರು, ದಂತ ವೈದ್ಯರಾದ ಡಾ.ರಾಜಶ್ರೀ ಮೋಹನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ಸೋಮಶೇಖರ್, ಹುಬ್ಬಳ್ಳಿ-ಧಾರವಾಡ ನಗೆಕೂಟಗಳ ಅಧ್ಯಕ್ಷ ಬಸವರಾಜ್ ಹೆಬ್ಬಸೂರ್ ಉಪಸ್ಥಿತರಿರಲಿದ್ದಾರೆ.
ರಾಜ್ಯ ಮಟ್ಟದ 19ನೇ ‘ನಗೆ ಸಮ್ಮೇಳನ’ ಹಿನ್ನೆಲೆಯಲ್ಲಿ ಜ.28 ಮತ್ತು 29ರಂದು ನಡೆಯುವ ಕಾರ್ಯಕ್ರಮದ ವಿವರ:
ರಾಜ್ಯ ಮಟ್ಟದ 19ನೇ ‘ನಗೆ ಸಮ್ಮೇಳನ’ ಮಾಹಿತಿ ಇಲ್ಲಿದೆ.