ಮಂಗಳೂರು: ದೇಶಾದ್ಯಂತ ಲವ್ ಜಿಹಾದ್ (Love Jihad) ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಹಿಂದು ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಎಂಬ ಕೂಗು ಹಿಂದು ಸಂಘಟನೆಗಳಿಂದ, ಹಿಂದುವಾದಿಗಳಿಂದ ಕೇಳಿಬರುತ್ತಿರುವ ಬೆನ್ನಲ್ಲೇ ಇದರ ತಡೆಗೆ ವಿಶ್ವ ಹಿಂದು ಪರಿಷತ್ ವತಿಯಿಂದ ಹೆಲ್ಪ್‌ಲೈನ್ ಆರಂಭ ಮಾಡಲಾಗಿದೆ.
ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್ ಸಹಾಯವಾಣಿಯನ್ನು ಪ್ರಾರಂಭ ಮಾಡಿದ್ದು, ಲವ್ ಜಿಹಾದ್ ಮುಕ್ತ ಸಮಾಜ ನಮ್ಮ ಗುರಿ ಎಂದು ಸ್ಲೋಗನ್ ಅನ್ನು ಸಹ ಹಾಕಿಕೊಳ್ಳಲಾಗಿದೆ.
ಲವ್ ಜಿಹಾದ್‌ಗೆ ಬಲಿಯಾಗುತ್ತಿರುವ ಸಹೋದರಿಯರ ರಕ್ಷಣೆಗೆ “ಲವ್ ಜಿಹಾದ್ ಹೆಲ್ಪ್‌ಲೈನ್” ಆರಂಭ ಮಾಡಿದ್ದು, ಮೊಬೈಲ್ ನಂಬರ್: ೯೧೪೮೬೫೮೧೦೮ ಗೆ ಕರೆ ಹಾಗೂ ೯೫೯೧೬೫೮೧೦೮ ಗೆ ವಾಟ್ಸ್‌ಆ್ಯಪ್‌ನಲ್ಲಿ ಸಿಲುಕಿದವರ ಮಾಹಿತಿ ನೀಡಲು ಮನವಿ ಮಾಡಲಾಗಿದೆ.
ಅನ್ಯ ಕೋಮಿನವರ ಜತೆ ಸಂಪರ್ಕದಲ್ಲಿರುವ ಯುವತಿಯರ ಫೋಟೊ ಸಹಿತ ವಿವರಗಳನ್ನೊಳಗೊಂಡ ಮಾಹಿತಿಯನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸುವಂತೆ ಇಲ್ಲವೇ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಲಾಗಿದೆ.
ಒಂದು ವೇಳೆ ಬ್ಲ್ಯಾಕ್‌ಮೇಲ್‌ಗೆ ಒಳಗಾದವರು ಸಹ ಕರೆ ಮಾಡಿ ವಿವರಣೆ ನೀಡಬಹುದಾಗಿದ್ದು, ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡಲಾಗಿದೆ. ಇಮೇಲ್ – antilovejihadmlr@gmail.com ಗೂ ಮಾಹಿತಿ ನೀಡುವಂತೆ ಪೋಸ್ಟರ್‌ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ | Amit Shah | ಗೃಹಸಚಿವರಿಗೆ ತಲೆಬಾಗಿ ನಮಿಸುವೆ ಎಂದ ಎಚ್.ಡಿ. ದೇವೇಗೌಡ; ಅಮಿತ್ ಶಾಗೆ ಹೊಗಳಿಕೆಯ ಸುರಿಮಳೆ