ಕನಕಗಿರಿ: ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ಶಿಲಾಶಾಸನಗಳು ಹಾಗೂ ಪ್ರಾಚ್ಯ ವಸ್ತುಗಳ (Antiquities) ಮ್ಯೂಜಿಯಂ (Museum) ನಿರ್ಮಾಣ ಹಿನ್ನೆಲೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸೋಮವಾರ ಗ್ರಾಮಕ್ಕೆ ಭೇಟಿ (Visit) ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಅವರು ಮಾತನಾಡಿ, ಕಲಿಕೇರಿ ಗ್ರಾಮದ ಮೂರು ಎಕರೆ ಜಮೀನಿನಲ್ಲಿ ಶಿಲಾಶಾಸನಗಳ ಮ್ಯೂಜಿಯಂ ನಿರ್ಮಾಣಕ್ಕೆ ಚಿಂತನೆ ನಡೆಸಿರುವುದು ಉತ್ತಮ ಕಾರ್ಯವಾಗಿದೆ ಮತ್ತು ಕನಕಗರಿ ತಾಲೂಕು ಇತಿಹಾಸ ಹಿನ್ನೆಲೆಯುಳ್ಳ ಪ್ರದೇಶವಾಗಿದ್ದು, ಮುಂದಿನ ಪೀಳಿಗೆಗೆ ಇತಿಹಾಸ ಸಾರುವ ಈ ಭಾಗದ ಸ್ಮಾರಕಗಳು, ಅವಶೇಷಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇದನ್ನೂ ಓದಿ: Asian Games 2023 : ಏಷ್ಯನ್ ಗೇಮ್ಸ್ನ ಕ್ರಿಕೆಟ್ ವೇಳಾಪಟ್ಟಿಯ ಬಗ್ಗೆ ಇಲ್ಲಿದೆ ಮಾಹಿತಿ
ಆ ನಿಟ್ಟಿನಲ್ಲಿ ಪ್ರಾಚೀನ ವಸ್ತು ಸಂಗ್ರಹಾಲಯ ನಿರ್ಮಾಣ ಶ್ಲಾಘನೀಯ ಹಾಗೂ ಒಳ್ಳೆಯ ಪ್ರಯತ್ನವಾಗಿದೆ ಎಂದರು.
ನಂತರ ಕಲಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ಆರ್‌ಎಂಎಸ್ ಶಾಲೆಗೆ ಭೇಟಿ ನೀಟಿ, ನರೇಗಾದಡಿ ಅನುಷ್ಠಾನಗೊಂಡ ಮೈದಾನ, ಶೌಚಾಲಯ, ಅಡುಗೆಕೋಣೆ, ಕಾಂಪೌಂಡ್, ಪೌಷ್ಟಿಕ ಕೈ ತೋಟ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ನರೇಗಾದಡಿ ಇನ್ನೂ ಹೆಚ್ಚಿನ ಶಾಲೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Weather Report : ಕರಾವಳಿ, ಮಲೆನಾಡಲ್ಲಿ ಇನ್ನೆರಡು ದಿನ ಭಾರಿ ಮಳೆ
ಈ ವೇಳೆ ಕನಕಗಿರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ತಾಪಂ ಸಿಬ್ಬಂದಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ಗ್ರಾಪಂ ಸಿಬ್ಬಂದಿಗಳು ಇದ್ದರು.