Site icon Vistara News

Madara Channaiah Gurupeeta: ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ

Madara Channaiah Gurupeeta

ಚಿತ್ರದುರ್ಗ: ನಗರದ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ (Madara Channaiah Gurupeeta) ಶುಕ್ರವಾರ ನೂತನ ವಟು ಸ್ವೀಕಾರ ಮಾಡಲಾಗಿದೆ. ನೂತನ ವಟುವಿಗೆ ಜಯಬಸವ ದೇವರು ಎಂದು ನಾಮಕರಣ ಮಾಡಲಾಗಿದೆ.

ಮಠದ ಆವರಣದ ಬಸವಾದಿ ಶರಣರ ಧರ್ಮ ಸಂಸತ್ ಸಭಾ ಮಂಟಪದಲ್ಲಿ ಬೆಳಗ್ಗೆ ನಡೆದ ವಟು ಸ್ವೀಕಾರ ಸಮಾರಂಭದಲ್ಲಿ ಲಿಂಗಧೀಕ್ಷೆ, ವಿಭೂತಿ ಧಾರಣೆ, ಲಿಂಗಧಾರಣೆ, ಹಸ್ತಮಸ್ತಕ ಸಂಯೋಜನೆ, ಪಾದಪೂಜೆ ಸೇರಿ ಬಸವ ತತ್ತ್ವದ ಪ್ರಕಾರ ಧಾರ್ಮಿಕ ವಿಧಿ ವಿಧಾನ ನೆರವೇರಿದವು. ಈ ವೇಳೆ ಮಾದಾರ ಶ್ರೀಗಳು ವಟು ಸ್ವೀಕಾರ ಮಾಡಿದರು.

ಮಾದಾರ ಚನ್ನಯ್ಯ ಗುರುಪೀಠಕ್ಕೆ ಸ್ವೀಕಾರ ಮಾಡಿರುವ ವಟು ಜಯಬಸವ ದೇವರ ಅವರು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದವರು. ಸವಿತಾ, ಮಹಾಲಿಂಗಪ್ಪ ದಂಪತಿ ದ್ವಿತೀಯ ಪುತ್ರ 9 ವರ್ಷದ ಲಖನ್ ಮಠಕ್ಕೆ ವಟು ಆಗಿದ್ದಾರೆ. ಈ ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು. ಇದರಲ್ಲಿ ಎರಡನೇ ಮಗ ಲಖಬ್ ಅವರನ್ನು ಮಠಕ್ಕೆ ನೀಡಲಾಗಿದೆ.

ಇದನ್ನೂ ಓದಿ | PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಜಿ, ಭಗಿರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೊಸದುರ್ಗ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಹಂಪಿಯ ಮಾತಂಗಮುನಿ ಮಠದ ಶ್ರೀ ಮಾತಂಗಮುನಿ ಸ್ವಾಮೀಜಿ, ಲಂಬಾಣಿ ಗುರುಪೀಠದ ಶ್ರೀ ನಂದ ಮಸಂದ ಸ್ವಾಮಿಗಳು, ಚಿತ್ರದುರ್ಗದ ಶ್ರೀ ವೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮಿಗಳು, ರಾಣೆಬೆನ್ನೂರಿನ ಶ್ರೀ ಗಜದಂಡ ಸ್ವಾಮಿಗಳು, ಸಿದ್ದಾರೂಢ ಆಶ್ರಮದ ಶ್ರೀ ಜಯದೇವ ಸ್ವಾಮಿಗಳು, ತಿಳುವಳ್ಳಿಯ ಶ್ರೀ ನಿರಂಜನಾಂದ ಸ್ವಾಮಿಗಳು ಶ್ರೀ ತಿಪ್ಪೇರುದ್ರ ಸ್ವಾಮಿಗಳು ಸತ್ಯಕ್ಕ ಜಯದೇವಿತಾಯಿ ಶ್ರೀ ಪೂರ್ಣಾನಂದ ಸ್ವಾಮಿಗಳು ಇದ್ದರು.

ಬಸವ ಜಯಂತಿ: ಧಾರವಾಡದಲ್ಲಿ ಗಮನಸೆಳೆದ ಬಣ್ಣ ಬಣ್ಣದ ರಂಗೋಲಿ ಚಿತ್ತಾರ

ಧಾರವಾಡ: ಬಸವ ಜಯಂತಿ ಪ್ರಯುಕ್ತ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳು ಗಮನಸೆಳೆದವು. ಗ್ರಾಮದ ಮೂರು ಸಾವಿರ ವಿರಕ್ತಮಠದ ಸ್ವಾಮೀಜಿಗಳ ಜನ್ಮದಿನ ಅಂಗವಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿರಕ್ತಮಠದ ಆವರಣದಲ್ಲಿ ಮಹಿಳೆಯೊಬ್ಬರು ಬಿಡಿಸಿದ ಬಸವೇಶ್ವರ ಚಿತ್ರ ಎಲ್ಲರ ಗಮನಸೆಳೆಯಿತು.

Exit mobile version