ದಾವಣಗೆರೆ: ಜಿಲ್ಲೆಯ ವಿವೇಕಾನಂದ ಬಡಾವಣೆಯಲ್ಲಿ ಇರುವ ಮಹೇಶ್ ಪಿಯು ಕಾಲೇಜ್ (Mahesh PU College) ಕಳೆದೊಂದು ವಾರದಿಂದ ಬಂದ್ ಆಗಿದೆ. ಇದಕ್ಕೆ ಕಾರಣ ಕಾಲೇಜು ಮ್ಯಾನೇಜ್ಮೆಂಟ್ ಹಾಗೂ ಕಾಲೇಜು ಕಟ್ಟಡ ಮಾಲೀಕರ ನಡುವಿನ ಜಟಾಪಟಿಯಾಗಿದೆ. ಆದರೆ, ವಿದ್ಯಾರ್ಥಿಗಳು ಮಾತ್ರ ಬೀದಿಯಲ್ಲಿ ನಿಲ್ಲುವಂತಾಗಿದೆ.
ಮಹೇಶ್ ಪಿಯು ಕಾಲೇಜು ಆಡಳಿತ ಮಂಡಳಿಯವರು ಕಟ್ಟಡಕ್ಕೆ ಬಾಡಿಗೆ ಕಟ್ಟದ ಕಾರಣ, ಕಟ್ಟಡ ಮಾಲೀಕರು ಕಾಲೇಜಿಗೆ ಬೀಗ ಹಾಕಿರುವ ಘಟನೆ ನಡೆದಿದೆ. ಕಟ್ಟಡದ ಮಾಲೀಕರು ಕಳೆದ ಒಂದು ವಾರದಿಂದ ಗೇಟ್‌ಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ತರಗತಿಗಳಿಗೆ ಹೋಗಲು ಆಗದೆ ವಿದ್ಯಾರ್ಥಿಗಳು ಗೇಟ್ ಮುಂದೆಯೇ ಕಾದು ನಿಂತು ವಾಪಸಾಗುವಂತಾಗಿದೆ.
ಮಹೇಶ್ ಪಿಯು ಕಾಲೇಜಿನಲ್ಲಿ ಸುಮಾರು 45 ಮಂದಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿದ್ದು, ತಮ್ಮ ಭವಿಷ್ಯ ಬೀದಿಪಾಲಾಗಿದೆ ಎಂದು ಚಿಂತೆಗೆ ಮುಳುಗಿದ್ದಾರೆ. ವಿದ್ಯಾರ್ಥಿಗಳ ಜತೆ ಪೋಷಕರು ಆಗಮಿಸಿ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಆದರೆ, ಪೋಷಕರ ಹಾಗೂ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದ ಕಾಲೇಜು ಆಡಳಿತ ಮಂಡಳಿ ಹಾಗೂ ಕಟ್ಟಡದ ಮಾಲೀಕರು ಮೌನಕ್ಕೆ ಜಾರಿದ್ದಾರೆ. ಇವರಿಬ್ಬರ ಬಾಡಿಗೆ ಗಲಾಟೆಯಲ್ಲಿ ವಿದ್ಯಾರ್ಥಿಗಳು ಬಡವಾಗುವಂತಾಗಿದೆ.
ಇದನ್ನೂ ಓದಿ | Crime News | ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ, ಯುವತಿ ತಂದೆಗೆ ಚಾಕು ಇರಿತ