ಬೆಂಗಳೂರು: ಭಾರಿ ಮಳೆಯಿಂದಾಗಿ (Rain News) ಬೆಂಗಳೂರಿನ ಹಲವೆಡೆ ಪ್ರವಾಹ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಇನ್ನೂ ಕೆಲವು ಪ್ರದೇಶಗಳು ಕೆರೆಯಂತಾದ ಕಾರಣ ಜನರನ್ನು ಸ್ಥಳಾಂತರ ಮಾಡುವಂತಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ಪ್ರವಾಹ ಪರಿಸ್ಥಿತಿ ಕುರಿತು ಟ್ವೀಟ್ ಮಾಡಿದ್ದ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರವಾಹದಲ್ಲಿ ಸಿಲುಕಿದ ಜನರನ್ನು ಎಕ್ಸ್‌ಕಾವೇಟರ್ (ಅಗೆಯುವ ಯಂತ್ರ) ಮೂಲಕ ರಕ್ಷಿಸುವ ವಿಡಿಯೊಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ, “ಮನಸ್ಸಿದ್ದಲ್ಲಿ ಮಾರ್ಗ” ಎಂದು ಹೇಳಿದ್ದರು. ಆದರೆ, ಮಹೀಂದ್ರಾ ಅವರ ಪ್ರತಿಕ್ರಿಯೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಯಾವುದೇ ವಿಚಾರದ ಬಗ್ಗೆ ಸಂಭ್ರಮ ಹಂಚಿಕೊಳ್ಳುವ ಹಾಗೂ ಪ್ರತಿಕ್ರಿಯಿಸುವ ಮೊದಲು, ಸ್ಥಳೀಯ ಆಡಳಿತವು ಜನರನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದೇ ಧಾಟಿಯಲ್ಲಿ ಹಲವು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Anand Mahindra | ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಆನಂದ್ ಮಹೀಂದ್ರಾ ನೀಡಿದ ಸಲಹೆಯೇನು?