Site icon Vistara News

Rain News: ಕುರಿದೊಡ್ಡಿಯಲ್ಲಿ ಮಲಗಿದ್ದ ವ್ಯಕ್ತಿಗೆ ಸಿಡಿಲು ಬಡಿದು ಸಾವು

Man Death due to lightning in Raichur

Man Death due to lightning in Raichur

ರಾಯಚೂರು: ಜಿಲ್ಲೆಯಲ್ಲಿ ಈ ವರ್ಷದಲ್ಲಿ ವರುಣಾಘಾತಕ್ಕೆ (Rain News) ಮೊದಲ ಬಲಿಯಾಗಿದೆ. ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಕುರಿದೊಡ್ಡಿಯಲ್ಲಿ ಮಲಗಿದ್ದ ವೇಳೆ ಸಿಡಿಲು ಬಡಿದಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬಲ್ಲಟಗಿ ಗ್ರಾಮದ ನಿವಾಸಿ ಬೀರಪ್ಪ (55) ಮೃತ ವ್ಯಕ್ತಿ.

ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಸುರಿದಿದೆ. ಇದರಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಅಪಾರ ಪ್ರಮಾಣ ಬೆಳೆ ನಷ್ಟ ಉಂಟಾಗಿದ್ದು, ಮರಗಳು ಉರುಳಿ ಪ್ರಾಣನಷ್ಟ ಕೂಡ ಆಗಿದೆ. ಅದೇ ರೀತಿ ಸಿಡಿಲು ಬಡಿದು ಹಲವರು ಮೃತಪಟ್ಟಿರುವ ಪ್ರಕರಣಗಳೂ ಕಂಡುಬಂದಿದೆ.

ಇದನ್ನೂ ಓದಿ | Drowned in Canal: ಕಾಲುವೆ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಹಿತ ಮೂವರ ಸಾವು

ಆಟೋ ಪಲ್ಟಿಯಾಗಿ ಪ್ರಯಾಣಿಕ ದಾರುಣ ಸಾವು

ರಾಯಚೂರು: ಆಟೋ ಪಲ್ಟಿಯಾಗಿ ಪ್ರಯಾಣಿಕ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ನಡೆದಿದೆ.

ನಂದಪ್ಪ ಲಿಂಗದಹಳ್ಳಿ ಎಂಬುವವರ ಪುತ್ರ ಅಮರೇಶ ಮೃತ ದುರ್ದೈವಿ. ಅಪಘಾತ ನಡೆದ ಬಳಿಕ ಆಟೋ ಚಾಲಕ ಪರಾರಿಯಾಗಿದ್ದಾನೆ. ಜಾಲಹಳ್ಳಿಯಿಂದ ತಿಂಥಣಿ ಬ್ರಿಡ್ಜ್ ಕಡೆಗೆ ಹೊರಟಿದ್ದ ಆಟೋ ಪಲ್ಟಿಯಾಗಿದೆ. ಆಟೋ ಚಾಲಕ ಅನಿಕೇತನ ಮೇಲೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case: ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್‌ ಬರ್ಬರ ಹತ್ಯೆ; ಇದು ಕೊಲೆಗೆ ಪ್ರತೀಕಾರ?

ಬಟ್ಟೆ ತೊಳೆಯಲು ಹೋಗಿ ಯುವಕ ನೀರು ಪಾಲು

ದಾವಣಗೆರೆ: ಬಟ್ಟೆ ತೊಳೆಯಲು ಹೋಗಿ ಯುವಕ ನೀರು ಪಾಲಾಗಿರುವ ಘಟನೆ ಜಿಲ್ಲೆ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ್ (33) ನೀರು ಪಾಲಾದ ಯುವಕ.

ಭದ್ರಾ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ನೀರಿನ ಸೆಳೆತಕ್ಕೆ ಯುವಕ ಕೊಚ್ಚಿಹೋಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶೋಧ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಹುಡುಕಾಟ ನಡೆಸಿದರೂ ಯುವಕನ ಮೃತದೇಹ ಪತ್ತೆಯಾಗಿಲ್ಲ.

Exit mobile version