ಹಾಸನ: ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ವಸ್ತು ತೆಗೆಯಲು ಹೋಗಿ ವಿದ್ಯುತ್ ಶಾಕ್ (Electric shock) ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಮಲ್ಲಪ್ಪ (58) ಮೃತ ದುರ್ದೈವಿ.
ಹಾಸನದ ಉದಯಗಿರಿ ಬಡಾವಣೆಯಲ್ಲಿ ಪ್ರಕರಣ ನಡೆದಿದ್ದು, ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಲ್ಲಪ್ಪ ಅವರು ಹಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿ ಮೇಲೆ ವಸ್ತುವೊಂದು ಬಿದ್ದಿತ್ತು. ಹೀಗಾಗಿ ಅದನ್ನು ತೆಗೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಕೋಲೊಂದನ್ನು ಬಳಸಿ ಕೈಯಲ್ಲಿ ನೆಲ ಒರೆಸುವ ಮಾಪ್ ಸಹಾಯದಿಂದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ವಸ್ತುವನ್ನು ತೆಗೆಯಲು ಮಲ್ಲಪ್ಪ ಮುಂದಾಗಿದ್ದಾರೆ.
ಈ ವೇಳೆ ತಂತಿಗೆ ಸ್ಪರ್ಶಿಸುತ್ತಿದ್ದಂತೆ ವಿದ್ಯುತ್ ಶಾಕ್ ಹೊಡೆದಿದೆ, ಮೈಮೇಲೆ ಬೆಂಕಿ ಆವರಿಸಿಕೊಂಡಂತೆ ಆಗಿದೆ. ಹಾಗೇ ಕೂಗಿಕೊಂಡು ಕೆಳಗೆ ಬಿದ್ದಿದ್ದಾರೆ. ವಿದ್ಯುತ್ ಶಾಕ್‌ನಿಂದ ಮಲ್ಲಪ್ಪ ಸಾಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಗು ಕೇಳಿಸಿಕೊಂಡ ಮನೆಯವರು ಕೆಳಗೆ ಬಿದ್ದ ಮಲ್ಲಪ್ಪರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಆದಾಗಲೇ ಉಸಿರು ಚೆಲ್ಲಿದ್ದರು ಎಂಬ ಸಂಗತಿ ತಿಳಿದುಬಂದಿದೆ.
ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Fuel Price | ವಾಹನ ಸವಾರರಿಗೆ ಗುಡ್ನ್ಯೂಸ್; ಪೆಟ್ರೋಲ್-ಡೀಸೆಲ್ ಬೆಲೆ ಶೀಘ್ರವೇ ಲೀಟರ್ಗೆ 2 ರೂ. ಕಡಿತವಾಗುವ ಸಾಧ್ಯತೆ