ಬೆಂ.ಗ್ರಾಮಾಂತರ: ಸಹೋದರನಿಗೆ ಮದುವೆ ಮಾಡಿಕೊಳ್ಳಲು ತಂಗಿಯನ್ನು ಕೊಡಲು ಒಪ್ಪದ ಪತ್ನಿಯನ್ನೇ ಪತಿ ಹತ್ಯೆ (Murder Case) ಮಾಡಿರುವ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ದಳಸಗೆರೆ ಗ್ರಾಮದಲ್ಲಿ ನಡೆದಿದೆ. ಕಿರುಕುಳ ನೀಡಿ ಗಂಡ ಮತ್ತು ಆತನ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಮಹಿಳೆ ಸಂಬಂಧಿಕರು ಆರೋಪ ಮಾಡಿದ್ದಾರೆ.
ಪವಿತ್ರಾ (25) ಮೃತ ಯುವತಿ. ಪತಿ ಮುರುಳಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮುರುಳಿ ತನ್ನ ತಮ್ಮನಿಗೆ ಪವಿತ್ರಾಳ ತಂಗಿ ಜತೆ ಮದುವೆ ಮಾಡಿಸುವಂತೆ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಆದರೆ ಹುಡುಗನಿಗೆ ಮಾನಸಿಕ ಆರೋಗ್ಯ ಸರಿಯಿಲ್ಲ ಎಂದು ತಂಗಿಯನ್ನ ನೀಡಲು ಪವಿತ್ರಾ ನಿರಾಕರಿಸಿದ್ದಾರೆ. ಜತೆಗೆ ಬೇರೆ ಕಡೆ ತಂಗಿಗೆ ಸಂಬಂಧ ನೋಡಿ ಮದುವೆಗೆ ಪವಿತ್ರಾ ಕುಟುಂಬಸ್ಥರು ಮುಂದಾಗಿದ್ದರು. ಹೀಗಾಗಿ ಪತ್ನಿ ಮೇಲೆ ಹಲ್ಲೆ ಮಾಡಿ ಗಂಡ ಹಾಗೂ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ | Assault Case: ಬೆಂಗಳೂರಿನಲ್ಲಿ ಪುಂಡರ ಹಾವಳಿ; ಬೇಕರಿಯಲ್ಲಿದ್ದ ತಿನಿಸನ್ನು ರಸ್ತೆಗೆ ಬಿಸಾಡಿ ದಾಂಧಲೆ
ಮಹಿಳೆಯನ್ನು ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಿ ಮುರುಳಿ ಮನೆ ಮುಂದೆ ಮೃತದೇಹವಿಟ್ಟು ಪವಿತ್ರಾ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರ ಹಲ್ಲೆ
ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಉತ್ತರ ತಾಲೂಕು ಯಲಹಂಕ ವಿಧಾನಸಭಾ ಕ್ಷೇತ್ರದ ಕೊಳ್ಳಿಗಾನಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪ್ರಚಾರ ನಡೆಸಬೇಕಿತ್ತು ನಟ ಪ್ರೇಮ್ ಜತೆ ಮತಯಾಚನೆ ಮಾಡಬೇಕಿದ್ದ ಮುನೆಗೌಡರನ್ನು ಬರಮಾಡಿಕೊಳ್ಳಲು ಗ್ರಾಮದಲ್ಲಿ ಕಾರ್ಯಕರ್ತರಾದ ಮೋಹನ್ ಹಾಗೂ ಸ್ನೇಹಿತರು ಸಿದ್ಧತೆ ನಡೆಸುತ್ತಿದ್ದರು.
ಇದನ್ನೂ ಓದಿ | Black Magic: ವಾಮಾಚಾರ ಮಾಡುವಾಗಲೇ ಗ್ರಾಮಸ್ಥರ ಕೈಗೆ ಆಗುಂತಕರು ಲಾಕ್; ಸ್ಮಶಾನದಲ್ಲಿತ್ತು ಮೂವರು ಹುಡುಗಿಯರ ಫೋಟೊ!
ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ ವಿಶ್ವನಾಥ್ ಆಪ್ತ ಕೊಳ್ಳಿಗಾನಹಳ್ಳಿ ವೆಂಕಟೇಶಪ್ಪ ಹಾಗೂ ಮಗ ಶ್ರೀನಿವಾಸ್ ಇಬ್ಬರು ಸೇರಿ ಜೆಡಿಎಸ್ ಕಾರ್ಯಕರ್ತ ಮೋಹನ್ ಸೇರಿ ಮೂರ್ನಾಲ್ಕು ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೆ ಅಲ್ಲ ಜೆಡಿಎಸ್ ಬಾವುಟ ಹಾರಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಗಾಯಾಳು ಮೋಹನ್ ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಖಲಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.