ಮಂಗಳೂರು: ಇಲ್ಲಿನ ಮುಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಹೊಸ ಕಾವೇರಿ ಬಳಿ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಹೋದ ಪಿಕಪ್ ಚಾಲಕ, ನಿರ್ವಾಹಕನಿಗೆ ಸಾರ್ವಜನಿಕರು ಸೇರಿ ಧರ್ಮದೇಟು (Accident news) ನೀಡಿದ್ದಾರೆ. ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಇತರ ಹಲವು ವಾಹನಗಳ ಸವಾರರು ಸೇರಿ ಪಿಕಪ್ ವಾಹನವನ್ನು ಬೆನ್ನಟ್ಟಿ ತಡೆದರು.
ಬಜ್ಪೆಯಿಂದ ಆಗಮಿಸಿದ್ದ ಪಿಕಪ್ ವಾಹನವೊಂದು ಬಜ್ಪೆ ಚೆಕ್ ಪೋಸ್ಟ್ ಬಳಿ ಮೂರು ಬೈಕ್‌ಗೆ ತಾಗಿಸಿದ್ದಾಗಿ ಆರೋಪಿಸಿಸಲಾಗಿದೆ. ಸುಮಾರು ಹತ್ತು ಬೈಕ್‌ಗಳಲ್ಲಿ ಬೆನ್ನಟ್ಟಿ ಬಂದಿದ್ದ ಆಕ್ರೋಶಿತ ಗುಂಪು, ಅಂದಾಜು 12 ಕಿಲೋ ಮೀಟರ್ ದೂರಕ್ಕೆ ಚೇಸ್ ಮಾಡಿ ತಡೆದು ನಿಲ್ಲಿಸಿದ್ದಾರೆ. ಪಿಕಪ್ ವಾಹನದಿಂದ ಚಾಲಕ, ನಿರ್ವಾಹಕನನ್ನು ಹೊರಗೆಳೆದು ಮುಖ, ಮೂತಿ ನೋಡದೆ ಹಲ್ಲೆ ನಡೆಸಿದ್ದಾರೆ.
ಚಾಲಕ, ನಿರ್ವಾಹಕರಿಬ್ಬರೂ ಗಾಂಜಾ ನಶೆಯಲ್ಲಿದ್ದಾಗಿ ಆಕ್ರೋಶಿತ ಗುಂಪು ಆರೋಪಿಸಿದೆ. ಹಲ್ಲೆ ನಡೆದಾಗ ಚಾಲಕ ಮೊದಲು ಹಿಂದುವಿನ ಹೆಸರು ಹೇಳಿದ್ದಾನೆ. ಆದರೆ ಡ್ರೈವಿಂಗ್ ಲೈಸೆನ್ಸ್ ಪರಿಶೀಲನೆ ವೇಳೆ ಮುಸ್ಲಿಂ ಹೆಸರು ಇರುವುದು ಗೊತ್ತಾಗಿದೆ. ಹಿಂದು ಹೆಸರು ಹೇಳಿದ್ದಕ್ಕಾಗಿ ಮತ್ತೆ ಆಕ್ರೋಶಗೊಂಡ ಗುಂಪು ಇನ್ನಷ್ಟು ಹಲ್ಲೆ ನಡೆಸಿದೆ.
ಇದನ್ನೂ ಓದಿ | ಎದೆಹಾಲು ಉಂಡು ಬೆಳೆದ ಮಗನ ಕೃತಘ್ನತೆ; 80 ವರ್ಷ ವಯಸ್ಸಿನ ಹೆತ್ತಮ್ಮನ ಎದೆಗೇ ಒದ್ದು ಪ್ರಾಣ ತೆಗೆದ