Site icon Vistara News

ಮಂಗಳೂರು ಸ್ಫೋಟ | ಏಳು ಕಡೆಗಳಲ್ಲಿ ಭಯೋತ್ಪಾದನೆ ವಿರುದ್ಧ ಜಾಗೃತಿ ಅಭಿಯಾನ, ಶಾರಿಕ್‌ ಪರ ವಕಾಲತ್ತು ಮಾಡದಂತೆ ಮನವಿ

ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ

ಮಂಗಳೂರು: ಕರಾವಳಿಗೆ ಸವಾಲೊಡ್ಡಿರುವ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ದಕ್ಷಿಣ ಕನ್ನಡದ ಏಳು ಸ್ಥಳಗಳಲ್ಲಿ ಸೋಮವಾರ ನಡೆಯಿತು.

ಮಂಗಳೂರಿನಲ್ಲಿ ನಡೆದ ಆಟೋ ರಿಕ್ಷಾ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ-ದುರ್ಗಾ ವಾಹಿನಿ ವತಿಯಿಂದ ಅಭಿಯಾನ ನಡೆಸಲಾಯಿತು. ಮಂಗಳೂರಿನ ಏಳು ಸ್ಥಳಗಳಲ್ಲಿ ಭಿತ್ತಿ ಪತ್ರ ಹಿಡಿದು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಮಂಗಳೂರಿನ ಜ್ಯೋತಿ ವೃತ್ತ, ಉರ್ವಾ ಸ್ಟೋರ್, ಕಾವೂರು, ಮೂಡಬಿದ್ರೆ, ತೊಕ್ಕೊಟ್ಟು, ಗುರುಪುರ ಕೈಕಂಬ, ಸುರತ್ಕಲ್‌ನಲ್ಲಿ ನಡೆದ ಅಭಿಯಾನದಲ್ಲಿ ವಿಶ್ವಹಿಂದು ಪರಿಷತ್‌, ಬಜರಂಗ ದಳ ಹಾಗೂ ದುರ್ಗಾವಾಹಿನಿ ಕಾರ್ಯಕರ್ತರು ಭಾಗಿಯಾದರು. ಇಸ್ಲಾಮ್ ಭಯೋತ್ಪಾದಕರಿಗೆ ಧಿಕ್ಕಾರ ಸೇರಿ ಹಲವಾರು ಭಿತ್ತಿಪತ್ರ ಹಿಡಿದಿದ್ದರು.

ಉಗ್ರ ಶಾರೀಕ್ ಪರ ವಕಾಲತ್ತು ವಹಿಸದಂತೆ ವಕೀಲರಿಗೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಮನವಿ ಮಾಡಿದರು.

ಪೇಜಾವರ ಶ್ರೀಗಳಿಂದ ಮನವಿ
ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಉಗ್ರರು ಹಿಂದುಗಳ ಸೋಗಿನಲ್ಲಿ ಬಂದು ದುಷ್ಕೃತ್ಯಗಳನ್ನು (ಮಂಗಳೂರು ಸ್ಫೋಟ) ನಡೆಸುವ ಅಪಾಯವಿರುತ್ತದೆ. ಈ ಬಗ್ಗೆ ನಾವು ಸದಾ ಜಾಗೃತವಾಗಿರಬೇಕು ಎಂದು ಉಡುಪಿ ಪೇಜಾವರ ಮಠದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ

ಮಂಗಳೂರು ಕುಕ್ಕರ್ ಬಾಂಬ್ ‌ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಅವರು ಕೋರಿದ್ದಾರೆ. ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವಗಳು ನಡೆಯುತ್ತಿವೆ. ಜನಸಂದಣಿ ಹೆಚ್ಚಿರುವ ಸಮಾರಂಭಗಳು ಜರುಗುತ್ತವೆ. ಇಂತಹ ಸ್ಥಳಗಳಲ್ಲಿ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿ ಉಂಟಾಗಲಿದೆ. ಹೀಗಾಗಿ ಪ್ರತಿಯೊಬ್ಬರೂ ಸದಾ ಜಾಗೃತರಾಗಿಬೇಕು ಎಂದು ಅವರು ಹೇಳಿದರು.

ಯಾವುದೇ ಸಂದೇಹಾಸ್ಪದ ಚಟುವಟಿಕೆ, ವ್ಯಕ್ತಿಗಳನ್ನು ಕಂಡ ಕೂಡಲೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ ಅವರು, ಮೊಬೈಲ್ ಹಾಗೂ ದಾಖಲೆ ಕಳೆದುಹೋದರೆ ಕೂಡಲೇ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ದಾಖಲೆ ಪಡೆಯಬೇಕು. ಇಲ್ಲವಾದರೆ ಇಂತಹ ಸಂಧರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತದೆ. ಮಾತ್ರವಲ್ಲ ಕೆಲವರು ಇಂಥ ನೀಚ ಕೃತ್ಯ ನಡೆಸಿ ಅದನ್ನು ಹಿಂದುಗಳ ತಲೆಗೆ ಕಟ್ಟುವ ಪ್ರಯತ್ನವನ್ನೂ ನಡೆಸುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕದ್ರಿ ದೇವಸ್ಥಾನ ಟಾರ್ಗೆಟ್‌: ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ಉಗ್ರ ಸಂಘಟನೆ

Exit mobile version