Site icon Vistara News

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 27ರಿಂದ ಜೂನ್‌ 13ರ ತನಕ ಮಾವು ಮತ್ತು ಹಲಸು ಮಾರಾಟ ಮೇಳ

mango mela

ಬೆಂಗಳೂರು: ಸಿಲಿಕಾನ್‌ ಸಿಟಿಯ ಮಾವು ಪ್ರಿಯರಿಗೆ ಇದು ಸಿಹಿ ಸುದ್ದಿ. ನಗರದ ಗ್ರಾಹಕರಿಗೆ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಮಾವು ಕೈಸೇರಲಿದೆ. ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವು ಮೇ 27ರಿಂದ ಜೂನ್‌ 13ರ ತನಕ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ.

ಮೇಳಕ್ಕೆ ಬರಲು ಸಾಧ್ಯವಾಗದವರಿಗೆ ಅಂಚೆ ಮೂಲಕ ಮಾವು ಮನೆಬಾಗಿಲಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ಮೇಳದಲ್ಲಿ 106 ಮಾವು ಮಳಿಗೆಗಳು, 16 ಹಲಸಿನ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಯ ಮಾವು ಹಾಗೂ 10ಕ್ಕೂ ಹೆಚ್ಚು ತಳಿಯ ಹಲಸು ಇರಲಿವೆ. ರಾಜ್ಯದಲ್ಲಿ 1.60 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿದೆ.

ಬಾದಾಮಿ, ರಸಪುರಿ, ಬೈಗನ್‌ಪಲ್ಲಿ, ಮಲ್ಲಿಕಾ, ಮಲಗೋವಾ, ಸಿಂಧೂರ, ಕೇಸರ್, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಖರೀದಿಗೆ ಲಭ್ಯ. ಉಪ್ಪಿನಕಾಯಿ ತಯಾರಿಗೆ ಉಪಯೋಗಿಸುವ ವಿವಿಧ ಮಾವಿನಕಾಯಿ ಮೇಳದಲ್ಲಿ ಇರಲಿದೆ. ಮಾವು ಬೆಳೆಗೆ ಸಂಬಂಧಿಸಿದ ಬೇಸಾಯ ಪದ್ಧತಿ, ಕಸಿ ಕಟ್ಟುವಿಕೆ, ಮಾವು ಮಾಗಿಸುವುದು, ವಿವಿಧ ಸಂಸ್ಕರಣಾ ಪದಾರ್ಥಗಳ ತಯಾರಿ ಕುರಿತು ಮೇಳದಲ್ಲಿ ತಜ್ಞರು

Exit mobile version