Site icon Vistara News

Raichur News: ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ: ವಿಜೃಂಭಣೆಯಿಂದ ಜರುಗಿದ ಮಹಾ ರಥೋತ್ಸವ

Mantralaya sri Raghavendra swamy aradhana mahotsava maha rathotsava

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ (Sri Guru Raghavendra Swamy) 352 ನೇ ಆರಾಧನಾ ಮಹೋತ್ಸವದ (Aradhana Mahotsava) ಉತ್ತರಾರಾಧನೆ ಅಂಗವಾಗಿ ಶನಿವಾರ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವಕ್ಕೆ (Maha Rathotsava) ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು.

ಮಹಾರಥೋತ್ಸವದ ಅಂಗವಾಗಿ ಶ್ರೀ ಗುರುರಾಯರ ಉತ್ಸವ ಮೂರ್ತಿಯನ್ನು ಶ್ರೀ ಮಠದ ಆವರಣದಿಂದ ಕಲಾ ತಂಡಗಳ ಮೆರವಣಿಗೆಯ ಮೂಲಕ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಠಣದ ಬಳಿಕ ಶ್ರೀ ಮಠಕ್ಕೆ ಕರೆತಂದು ಮೂಲ ಬೃಂದಾವನಕ್ಕೆ ಪೂಜೆ ಸಲ್ಲಿಸಲಾಯಿತು. ವಸಂತೋತ್ಸವದ ಬಳಿಕ ವಿಜೃಂಭಣೆಯಿಂದ ಮಹಾರಥೋತ್ಸವ ಜರುಗಿತು.

ರಥೋತ್ಸವದ ನಿಮಿತ್ತ ನೆರೆದಿದ್ದ ಸಹಸ್ರಾರು ಭಕ್ತರಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ ಮಾತನಾಡಿ, ಇಂದು ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಸಮಯದಲ್ಲಿ ಭಕ್ತಾದಿಗಳ ಸೇವೆಗೆ ಮೆಚ್ಚಿ ಗುರುರಾಯರು ಆನಂದದಿಂದ ಮಹಾರಥದಲ್ಲಿ ವಿರಾಜಮಾನರಾಗಿ, ಎಲ್ಲ ಭಕ್ತಾದಿಗಳಿಗೆ ಹರಸುತ್ತಾರೆ ಎಂದು ತಿಳಿಸಿದರು.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು.

ಇದನ್ನೂ ಓದಿ: ವಿಸ್ತಾರ Explainer: ಆದಿತ್ಯ L1 ಅಲ್ಲಿಗೆ ತಲುಪೋದು ಯಾವಾಗ? ಮಿಷನ್ ಬಗ್ಗೆ ನಿಮಗೀ 12 ಸಂಗತಿಗಳು ತಿಳಿದಿರಲಿ!

ಇಂದು ದೇಶ ಜಗದ್ಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದು, ಚಂದ್ರಯಾನ ಯಶಸ್ವಿ ಬಳಿಕ, ಸೂರ್ಯಯಾನ ಇಂದು ಆರಂಭಿಸಿದ್ದು, ಇದರಲ್ಲಿ ಯಶಸ್ವಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

ದೇಶ ಭಕ್ತಿ, ಧರ್ಮ ಭಕ್ತಿ, ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ದೇಶವನ್ನು ವಿಶ್ವ ಗುರುವನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು‌, ದಿನದಿಂದ ದಿನಕ್ಕೆ ಗುರುರಾಯರ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಹಾಕಿಕೊಂಡಿದೆ ಎಂದು ಹೇಳಿದರು.

ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದಲ್ಲಿ ಶ್ರೀ ಮಠದಿಂದ ಭಕ್ತರ ಅನುಕೂಲಕ್ಕಾಗಿ ನರಹರಿತೀರ್ಥ ವಸತಿ ಗೃಹ, ಶ್ರೀಮೂಲರಾಮ ವಸತಿ ಗೃಹ, ವಿಜಯೀಂದ್ರ ವಸತಿ ಗೃಹ ನವೀಕರಿಸಲಾಗಿದ್ದು, ತುಂಗಾ ಮಾರ್ಗ ಉದ್ಘಾಟನೆ ಮಾಡಲಾಗಿದೆ. ಶೀಘ್ರದಲ್ಲಿ ಆಧುನಿಕ ಸ್ನಾನ ಘಟ್ಟ ನಿರ್ಮಾಣ ಸೇರಿದಂತೆ ಭಕ್ತರಿಗೆ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಶ್ರೀ ಮಠವು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು. ಬಳಿಕ ಹೆಲಿಕ್ಯಾಪ್ಟರ್ ಮೂಲಕ ರಥಕ್ಕೆ ಶ್ರೀಗಳಿಂದ ಪುಷ್ಪವೃಷ್ಟಿ ನಡೆಯಿತು.

ಇದನ್ನೂ ಓದಿ: International Year of Millets : ಸಿರಿಧಾನ್ಯಗಳ ಬಗ್ಗೆ ಭಾರತಕ್ಕೆ ಏಕೆ ಇಷ್ಟು ಆಸಕ್ತಿ?

ಮಹಾರಥೋತ್ಸವದಲ್ಲಿ ಚಂಡಿ ಮೇಳ, ಡೊಳ್ಳು ಕುಣಿತ, ಬ್ಯಾಂಡ್ ವಾದನ , ಭಜನಾ ಮಂಡಳಿಗಳು ಸೇರಿದಂತೆ ಇತರೆ ಕಲಾ ವಾದ್ಯಗಳು, ಕಲಾ ತಂಡಗಳ ನೃತ್ಯ ಪ್ರದರ್ಶನ ನಡೆಯಿತು.

Exit mobile version