Site icon Vistara News

Manvi MLA | ಕಳಪೆ ಕಾಮಗಾರಿಗೆ ಕಿಡಿ; ಗುತ್ತಿಗೆದಾರನ ಕನ್ನಡಕ ಕಿತ್ತೆಸೆದ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ

ರಾಯಚೂರು ಮಾನ್ವಿ ಶಾಸಕ ರಾಜು

ರಾಯಚೂರು: ಇಲ್ಲಿನ ಮಾನ್ವಿ ಶಾಸಕ (Manvi MLA) ರಾಜಾ ವೆಂಕಟಪ್ಪ ನಾಯಕ ನಡುರಸ್ತೆಯಲ್ಲಿ ನಿಂತು ಗುತ್ತಿಗೆದಾರ ಹಾಗೂ ಇಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಿಂಗಳು ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರುವುದು ಹಾಗೂ ಕಳಪೆ ಕಾಮಗಾರಿ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ.

ಕಳಪೆ ಕಾಮಗಾರಿ ಕುರಿತು ಪ್ರಶ್ನೆ ಮಾಡುವ ಭಾರದಲ್ಲಿ ಗುತ್ತಿಗೆದಾರ ಪ್ರಭು ಎಂಬುವವರ ಕನ್ನಡಕವನ್ನು ಕಿತ್ತೆಸೆದು ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ ಹೊರಹಾಕಿದ್ದಾರೆ. ಕವಿತಾಳ ಪಟ್ಟಣಕ್ಕೆ ಕಾಮಗಾರಿ ವೀಕ್ಷಣೆಗೆಂದು ಶಾಸಕರು ತೆರಳಿದ್ದ ವೇಳೆ ಸಾರ್ವಜನಿಕರಿಂದ ದೂರುಗಳ ಸರಮಾಲೆ ಕೇಳಿ ಬಂತು. ಇದರಿಂದ ಸಿಟ್ಟಿಗೆದ್ದ ಶಾಸಕರು ಪಿಡಬ್ಲ್ಯುಡಿ ಇಲಾಖೆಯ ಇಂಜಿನಿಯರ್ ಮುವೇಲ್ಲಪ್ಪ ಹಾಗೂ ಗುತ್ತಿಗೆದಾರ ಪ್ರಭುವಿಗೆ ಏಕವಚನದಲ್ಲಿ ನಿಂದಿಸಿದರು.

ಗುತ್ತಿಗೆದಾರ ಪ್ರಭುವಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲಬುರಗಿಯಿಂದ ಯಾಕೆ ಬರುತ್ತಿರಿ? ನಮ್ಮ ತಾಲೂಕಿನವರು ಇರಲಿಲ್ವಾ? ಇಷ್ಟೊತ್ತಿಗೆ ಕೆಲಸ ಮುಗಿದು ಹೋಗುತ್ತಿತ್ತು. ನಮ್ಮ ಹೆಸರು ಕೆಡಿಸಲು ಈ ರೀತಿ ಮಾಡುತ್ತಿದ್ದೀರಿ.‌ ವಿರೋಧ ಪಕ್ಷದ ನಾಯಕರ ಮಾತು ಕೇಳಿ ಹೀಗೆ ಮಾಡುತ್ತಿದ್ದೀರಿ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಶಿವನಗೌಡ ನಾಯಕ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Honey Trap | ರಾಜಕಾರಣಿಗಳ ಹನಿಟ್ರ್ಯಾಪ್‌ಗೆ ಪಾಕ್ ಸೇನೆಯಿಂದ ನಟಿಯರ ಬಳಕೆ! ಮಾಜಿ ಸೇನಾಧಿಕಾರಿ ಹೇಳಿಕೆಗೆ ಆಕ್ರೋಶ

Exit mobile version