Site icon Vistara News

ಮಂಗಳೂರು ಕೋರ್ಟ್‌ನಲ್ಲಿ ಮಳಲಿ‌ ಮಸೀದಿ-ಮಂದಿರ ಫೈಟ್

malali masjid

ಮಂಗಳೂರು: ನಗರದ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮಳಲಿ ಮಸೀದಿ ವಿವಾದ ಪ್ರಕರಣದ ಅರ್ಜಿ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿದೆ.

ವಿಎಚ್‌ಪಿ ಪರ ವಕೀಲ ಮತ್ತು ಮಸೀದಿ ಕಮಿಟಿ ವಕೀಲರ ವಾದ ಮಂಡಿಸಿದ್ದಾರೆ. ವಿಎಚ್‌ಪಿ ಪರ ವಕೀಲ ವಾದ ಮಂಡಿಸುತ್ತಾ, ಮಳಲಿ ಮಸೀದಿ ನವೀಕರಣ ಸಮಯದಲ್ಲಿ ದೇವಸ್ಥಾನದ ಮಾದರಿಯ ರಚನೆಗಳು ಸಿಕ್ಕಿವೆ. ಅದರ ಫೋಟೋಗಳನ್ನು ನೀಡಲಾಗಿದೆ. ಇದೊಂದು ಜ್ಞಾನವಾಪಿ ಮಾದರಿ ಪ್ರಕರಣವಾಗಿದ್ದು, ಸತ್ಯಾಸತ್ಯತೆ ತಿಳಿಯಬೇಕು. ಹೀಗಾಗಿ ಜಾಗದ ಸರ್ವೇ ನಡೆಸಲು ಕೋರ್ಟ್ ಕಮೀಷನರ್ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಎಚ್‌ಪಿ ಪರ ವಕೀಲರ ವಾದಕ್ಕೆ ಮಸೀದಿ ಕಮಿಟಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಮಸೀದಿಗೆ 700 ವರ್ಷಗಳ ಇತಿಹಾಸವಿದೆ. ಅದು ಸರ್ಕಾರಿ ಜಾಗವಾಗಿದ್ದು, ಇಲ್ಲಿ ಯಾವ ದೇವಸ್ಥಾನ ಇತ್ತು ಎಂದು ಸಾಕ್ಷ್ಯ ಒದಗಿಸಲಿ. ಮಳಲಿ‌ ಮುಸ್ಲಿಮರು ಹಲವು ವರ್ಷಗಳಿಂದ ಇಲ್ಲಿ ಅವರ ಧಾರ್ಮಿಕ ಚಟುವಟಿಕೆ ಮಾಡುತ್ತಿದ್ದಾರೆ. ನ್ಯಾಯಾಲಯ ವಿಎಚ್‌ಪಿ ಅರ್ಜಿ ವಜಾಗೊಳಿಸಿ, ಮಸೀದಿ ನವೀಕರಣಕ್ಕೆ ಅನುಮತಿ ‌ಕೊಡಬೇಕು ಎಂದು ನ್ಯಾಯಾಧೀಶರನ್ನು ಕೋರಿದ್ದಾರೆ.

ವಿವಾದಿತ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಜಾಗ ಹಿಂದುಗಳಿಗೆ ಸೇರಬೇಕು. ಹೀಗಾಗಿ ಮಸೀದಿ ನವೀಕರಣಕ್ಕೆ ತಡೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಬೇಕು ಎಂದು ಮಸೀದಿ ಆಡಳಿತ ಮಂಡಳಿ ಸೋಮವಾರ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ | ಮಳಲಿ ಮಸೀದಿ ವಿವಾದದ ಸೌಹಾರ್ದ ಇತ್ಯರ್ಥಕ್ಕೆ ಹಿಂದೂ-ಮುಸ್ಲಿಂ ಮುಖಂಡರ ನಿರ್ಧಾರ

Exit mobile version