ದಾವಣಗೆರೆ: ನಗರದ ಆಂಜನೇಯ ಬಡಾವಣೆಯಲ್ಲಿರುವ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ (Nursing college) ನಡೆಯುತ್ತಿದ್ದ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳಿಗೆ ನರ್ಸಿಂಗ್ ಪರೀಕ್ಷೆಯಲ್ಲಿ ನಕಲು ಮಾಡಲು ಕಾಲೇಜು ಸಿಬ್ಬಂದಿಯೇ ಸಾಥ್ ನೀಡಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ತಿಳಿದು ಕೆಲವು ಸಂಘಟನೆಯವರು ಕ್ಯಾಮೆರಾ ಹಿಡಿದು ಸ್ಥಳಕ್ಕೆ ಭೇಟಿ ನೀಡಿದಾಗ ಸಿಬ್ಬಂದಿಯೇ ತಮ್ಮ ಮೊಬೈಲ್ ನೋಡಿಕೊಂಡು ಉತ್ತರಗಳನ್ನು ಹೇಳಿಕೊಡುತ್ತಿರುವುದು ಗೊತ್ತಾಗಿದೆ.
ನರ್ಸಿಂಗ್ ಕಾಲೇಜಿನ ಮೊದಲ ಅಟಾಮಿಕ್ ವಿಷಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10 ಸಾವಿರ ರೂಪಾಯಿ ಪಡೆದು ನಕಲು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ದುಡ್ಡು ನೀಡಿದವರಿಗೆ ಮಾತ್ರ ಸಿಬ್ಬಂದಿ ಉತ್ತರ ಹೇಳಿಕೊಡುತ್ತಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.
ಆದರೆ, ಈ ಬಗ್ಗೆ ಕೊಠಡಿ ಸೂಪರ್‌ವೈಸರ್ ಅವರನ್ನು ಪ್ರಶ್ನಿಸಿದಾಗ, ನಾವು ಯಾರೂ ನಕಲು ಮಾಡಲು ಅವಕಾಶ ನೀಡಿಲ್ಲ. ಯಾರಿಗೂ ಮೊಬೈಲ್ ನೋಡಿಕೊಂಡು ಉತ್ತರ ಹೇಳಿಕೊಟ್ಟಿಲ್ಲ. ತಮ್ಮ ಕೈಯಲ್ಲಿ ಮೊಬೈಲ್ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Vistara Impact | ಬಸ್‌ಗಾಗಿ ಸಿಎಂ ಅಂಕಲ್‌ಗೆ ಮನವಿ ಮಾಡಿದ ಮಕ್ಕಳು; ಮರು ದಿನವೇ ಬಂದ ಬಸ್‌ಗೆ ಸಿಂಗಾರ ಮಾಡಿದ ಗ್ರಾಮಸ್ಥರು