Site icon Vistara News

ಮುರುಘಾ ಮಠದಲ್ಲಿ ನಾಳೆ ಸಾಮೂಹಿಕ ವಿವಾಹ; ಮದುವೆಯಿಂದ ಹಿಂದೆ ಸರಿದ 3 ಜೋಡಿ

Murugha Seer

ಚಿತ್ರದುರ್ಗ: ಮುರುಘಾ ಮಠದಲ್ಲಿ ಪ್ರತಿ ತಿಂಗಳ 5ನೇ ತಾರೀಖು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಸೆ.5ರಂದು ಕೂಡ ಎಂದಿನಂತೆ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಆದರೆ ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿವಾಹಕ್ಕೆ ನೋಂದಣಿ ಮಾಡಿಕೊಂಡವರೂ ಹಿಂದೆ ಸರಿಯುತ್ತಿದ್ದಾರೆ.

ವಿವಾಹಕ್ಕೆ 10 ಜೋಡಿಗಳ ನೋಂದಣಿಯಾಗಿತ್ತು. ಆದರೆ ಅವರಲ್ಲಿ 3 ಜೋಡಿ ಹಿಂದಕ್ಕೆ ಸರಿದಿವೆ. ಮುರುಘಾಶ್ರೀ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿವಾಹಕ್ಕೆ ನೋಂದಣಿ ಮಾಡಿಸಿದವರು ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಾಹವಾಗಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ಮುರುಘಾಶ್ರೀ ಅನುಪಸ್ಥಿತಿಯಲ್ಲಿ ಮಠದ ಕಾರ್ಯಕಲಾಪಗಳು ಎಂದಿನಂತೆ ನಡೆಯುತ್ತಿವೆ. ಅದರಂತೆ ಮಠದ ತಾತ್ಕಾಲಿಕ ಉಸ್ತುವಾರಿ ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಸೆ.5ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಖಾಸಗಿ ಕೋಣೆ, ಸ್ನಾನದ ಮನೆಯ ಮಹಜರು ಮಾಡುತ್ತಿರುವ ಪೊಲೀಸರು

Exit mobile version