Site icon Vistara News

Master Chef India: ಮಂಗಳೂರಿನ ಪ್ರತಿಭೆ ‘ಮಾಸ್ಟರ್‌ ಶೆಫ್‌ ಇಂಡಿಯಾ’

aashik

aashik

ಮಂಗಳೂರು: ಹಿಂದಿಯ ಸೋನಿ ಲೈವ್‌ (Sony liv) ಒಟಿಟಿ ವೇದಿಕೆ ಆಯೋಜಿಸಿದ್ದ ಮಾಸ್ಟರ್‌ ಶೆಫ್‌ ಇಂಡಿಯಾ 2023 (Master Chef India) ಸ್ಪರ್ಧೆಯಲ್ಲಿ ಮಂಗಳೂರಿನ 24ರ ಹರೆಯದ ಮುಹಮ್ಮದ್‌ ಆಶಿಕ್‌ ವಿಜೇತರಾಗಿ ಹೊರ ಹೊಮ್ಮಿದ್ದಾರೆ.

ಮಂಗಳೂರಿನ ಜೆಪ್ಪು ಮಹಾಕಾಳಿ ಪಡ್ಪುವಿನ ಖಾದರ್‌- ಸಾರಮ್ಮ ದಂಪತಿಯ ಪುತ್ರ ಮುಹಮ್ಮದ್‌ ಆಶಿಕ್‌ ಈ ಹಿಂದೆ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್‌ಮೆನ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದ ಅವರು ಬಾಲ್ಯದಿಂದಲೂ ವೈವಿಧ್ಯಮಯ ಖಾದ್ಯ ತಯಾರಿಸುವಲ್ಲಿ ಆಸಕ್ತಿ ಹೊಂದಿದ್ದರು.

ಸ್ಪರ್ಧೆಯ ಅಂತಿಮ ಹಂತದಲ್ಲಿ ರುಖ್ಸಾರ್‌ ಸಯೀಸ್‌, ಸೂರಜ್‌ ಥಾಪಾ, ನಂಬಿ ಜೆಸ್ಸಿಕಾ ಮರಕ್‌ ಮತ್ತು ಮುಹಮ್ಮದ್‌ ಆಶಿಕ್‌ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಚಾಂಪಿಯನ್‌ ಮಟ್ಟ ಆಶಿಕ್‌ ಪಾಲಾಯಿತು. ನಂಬಿ ಜೆಸ್ಸಿಕಾ ಮರಕ್‌ ಮತ್ತು ರುಖ್ಸಾರ್‌ ಸಯೀದ್‌ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದರು.

ಕಳೆದ ವರ್ಷ ಆಶಿಕ್‌ ʼಮಾಸ್ಟರ್‌ ಶೆಫ್‌ ಇಂಡಿಯಾʼ ಸ್ಪರ್ಧೆಯಲ್ಲಿ ಭಾಗವಹಿಸಿ ಸೋಲು ಕಂಡಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸಿ ಯಶಸ್ಸು ಗಳಿಸಿದ್ದಾರೆ. ಅವರು ತಮ್ಮ ಸಂಬಂಧಿ ಮುಹಮ್ಮದ್ ಆಲಿ ಅವರ ಆರ್ಥಿಕ ನೆರವಿನ ಸಹಾಯದಿಂದ 20ನೇ ವಯಸ್ಸಿನಲ್ಲಿ ಮಂಗಳೂರು ನಗರದ ಬಲ್ಮಠದಲ್ಲಿ ಕುಲ್ಕಿ ಹಬ್‌ ತೆರೆದಿದ್ದರು. ಈ ಹಿಂದೆ ಹೈದರಾಬಾದ್‌, ಬೆಂಗಳೂರಿನಲ್ಲಿ ನಡೆದ ಶೆಫ್‌ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು.

ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಆಶಿಕ್‌, ಸ್ಪರ್ಧೆಯ ವೇಳೆ ನೆರವು ನೀಡಿದ, ತೀರ್ಪುಗಾರರಾದ ವಿಕಾಸ್‌, ರಣವೀರ್‌ ಮತ್ತು ಪೂಜಾ ಹಾಗೂ ಸಹ ಸ್ಪರ್ಧಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: Yash 19 Movie Update: ನಿರ್ಮಾಣ ಕ್ಷೇತ್ರಕ್ಕೆ ರಾಕಿ ಭಾಯ್‌ ಎಂಟ್ರಿ; `ಟಾಕ್ಸಿಕ್‌’ನಲ್ಲಿ ಮಲಯಾಳಂ ಖ್ಯಾತ ನಟ?

Exit mobile version