ಬಳ್ಳಾರಿ: ನಾಲ್ಕು ಜಿಲ್ಲೆಯ ೨೨ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಚುನಾವಣೆ ನಡೆಸುವುದು ನಮ್ಮ ಗುರಿಯಾಗಿದೆ. ೫೫೭೨ ಬೂತ್‌ಗಳಲ್ಲಿ ಮತದಾನ ನಡೆಯಲಿದೆ. ಕಾನೂನು ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಬಳ್ಳಾರಿ ಪೊಲೀಸ್ ವಲಯ ಶಾಂತಿ ವಲಯ. ಕಾನೂನು ಸುವ್ಯವಸ್ಥೆ ಭಂಗ ಉಂಟು ಮಾಡುವ ದೊಡ್ಡ ಘಟನೆ ನಡೆದಿಲ್ಲ.
ಬಳ್ಳಾರಿ ಪತ್ರಕರ್ತರ ಸಾಂಸ್ಕೃತಿಕ ಒಕ್ಕೂಟದಿಂದ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮೀಟ್ ದಿ ಪ್ರೆಸ್‌ನ (Meet the Press) ಅತಿಥಿ ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್ ಅವರ ಮನದಾಳದ ಮಾತುಗಳಿವು.
ಕೇಸ್ ಇದ್ದವರಿಗೆ ಚುನಾವಣೆ ಕೆಲಸವಿಲ್ಲ
ನಾಲ್ಕೈದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಎಸ್ಐಗಳಿಗೆ ಒಂದು ವಾರದಲ್ಲಿಯೇ ಪಿಎಸ್ಐ ಪ್ರಮೋಷನ್ ನೀಡಲಾಗುತ್ತದೆ. ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಕ್ರಿಮಿನಲ್ ಕೇಸ್ ಇದ್ದವರು ಮತ್ತು ಜೂನ್‌ನಲ್ಲಿ ನಿವೃತ್ತಿಯಾಗುವ ಅಧಿಕಾರಿ ಮತ್ತು ಸಿಬ್ಬ0ದಿಯನ್ನು ನಿಯೋಜಿಸುವುದಿಲ್ಲ, ಈ ಬಗ್ಗೆ ಆಯೋಗದ ಸೂಚನೆ ಇದೆ. ಸರಗಳ್ಳತನ ಹೆಚ್ಚಾಗಿದೆ, ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ | Lok Adalat: ಲೋಕ್ ಅದಾಲತ್ ದಾವೆದಾರರ ಸಂಬಂಧಗಳು ಗಟ್ಟಿಯಾಗಿ ಉಳಿಯಲು ಸಹಕಾರಿ: ನ್ಯಾಯಾಧೀಶ ರವಿಕುಮಾರ್
ವಿಕ್ಟಿಮ್ ಡೇ ಮತ್ತು ದಲಿತರ ದಿನಾಚರಣೆ
ಜನಸ್ನೇಹಿ ಪೊಲೀಸ್ ವ್ಯವಸ್ಥೆ ದೃಷ್ಟಿಯಿಂದ ಪ್ರತಿ ತಿಂಗಳ ಮೂರನೇ ಶನಿವಾರ ಪ್ರತಿ ಪೊಲೀಸ್ ಠಾಣೆಯಲ್ಲಿ ವಿಕ್ಟಿಮ್ ಡೇ ಅಥವಾ ನೊಂದವರ ದಿನ ಆಚರಿಸಲಾಗುತ್ತದೆ. ಪ್ರತಿ ತಿಂಗಳ ನಾಲ್ಕನೇ ಭಾನುವಾರ ದಲಿತ ದಿನ ಆಚರಿಸಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಆಂಧ್ರ ಪ್ರದೇಶ ಗಡಿಯಲ್ಲಿ ಕಾಮನ್ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗುತ್ತದೆ. ಅನಧಿಕೃತ ವ್ಯಕ್ತಿ, ವಸ್ತು, ಮತದಾರರ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಳ್ಳಾರಿ ವಲಯ ವ್ಯಾಪ್ತಿಯಲ್ಲಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿ ನಾಲ್ಕು ಜಿಲ್ಲೆಗಳು ಬರಲಿವೆ. ನಾಲ್ಕು ಜಿಲ್ಲೆಗಳಲ್ಲಿ ೪ ಎಸ್‌ಪಿ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚುವರಿ ಎಸ್‌ಪಿಗಳನ್ನು ನಿಯೋಜಿಸಲಾಗಿದೆ. ಬಳ್ಳಾರಿ ವಲಯದಲ್ಲಿ ೮೯ ಪೊಲೀಸ್ ಠಾಣೆಗಳಿದ್ದು, ೨೨ ವೃತ್ತ ಕಚೇರಿ, ೧೧ ಡಿವೈಎಸ್‌ಪಿ ಕಚೇರಿ, ೯ ಔಟ್‌ಪೋಸ್ಟ್‌ಗಳಿವೆ.
ಇದನ್ನೂ ಓದಿ | Vistara Kathaspardhe : ವಿಸ್ತಾರ ನ್ಯೂಸ್‌ನಿಂದ ಯುಗಾದಿ-2023 ಕಥಾ ಸ್ಪರ್ಧೆ; 1 ಲಕ್ಷ ರೂ. ಬಹುಮಾನ!
ಬಳ್ಳಾರಿ ವಲಯ 25,181 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಬೆಳಗಾವಿ ವಲಯ ನಂತರ ಅತಿದೊಡ್ಡ ವಲಯವಾಗಿದೆ. ೫೮.೧೬ ಲಕ್ಷ ಜನಸಂಖ್ಯೆಯಿದ್ದು, ೨೮ ಲಕ್ಷ ಪುರುಷರು, ೨೯ ಲಕ್ಷ ಮಹಿಳೆಯರು ಇದ್ದಾರೆ. ಬಳ್ಳಾರಿ ಜಿಲ್ಲೆ ೫, ವಿಜಯನಗರ ೫, ರಾಯಚೂರು ೭, ಕೊಪ್ಪಳ ೫ ಸೇರಿ ಒಟ್ಟು ೨೨ ವಿಧಾನಸಭೆ ಕ್ಷೇತ್ರಗಳಿದ್ದು, ೫೫೭೨ ಬೂತ್‌ಗಳಿವೆ. ಚುನಾವಣಾ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಸ್ವಲ್ಪ ಜಾಸ್ತಿಯಾಗಬಹುದು.
ಕಳೆದ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ೩೦೫, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ೧೫೮ ಪ್ರಕರಣಗಳು ದಾಖಲಾಗಿದ್ದು, ಕೆಲ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಕೆಲ ಪ್ರಕರಣಗಳು ತನಿಖೆ ಹಂತದಲ್ಲಿವೆ ಎಂದು ತಿಳಿಸಿದರು.
ಮೀಟ್ ದಿ ಪ್ರೆಸ್‌ನಲ್ಲಿ ಬಳ್ಳಾರಿ ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಸ್‌ಪಿ ನಟರಾಜ್, ನಗರ ಡಿವೈಎಸ್‌ಪಿ ಕೆ.ಬಸವರಾಜ್ ಇದ್ದರು.