ಹೊನ್ನಾಳಿ: ತಾಲೂಕಿನ ತುಗ್ಗಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ (Stone mining) ಸುತ್ತಮುತ್ತಲಿನ ಹೊಲಗಳಿಗೆ ಹಾಗೂ ಹತ್ತಿರದಲ್ಲಿರುವ ಗವಿಸಿದ್ದೇಶ್ವರ ದೇವಸ್ಥಾನಕ್ಕೂ (Gavisiddeshwara Temple) ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಕಲ್ಲು ಗಣಿಗಾರಿಕೆಯನ್ನು ಬಂದ್ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ, ಗ್ರಾಮಸ್ಥರು ಹಾಗೂ ಭಕ್ತಾಧಿಗಳು, ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಕೆಲವು ದಿನಗಳಿಂದ ಗ್ರಾಮದ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದಾಗಿ ಸುತ್ತಮುತ್ತಲಿನ ಹೊಲಗಳ ಮೇಲೆ ತೀವ್ರ ದುಷ್ಪರಿಣಾಮ ಬೀಳುತ್ತಿದ್ದು, ಧೂಳಿನಿಂದಾಗಿ ಬೆಳೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ ಇದರಿಂದಾಗಿ ರೈತರಿಗೆ ಉತ್ತಮ ಫಸಲು ಸಿಗುತ್ತಿಲ್ಲ. ಹೀಗಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ: Child Death : ಆಟವಾಡುತ್ತಾ ಬಾವಿಯಲ್ಲಿ ಬಿದ್ದು 3 ವರ್ಷದ ಬಾಲಕಿ ದಾರುಣ ಸಾವು
ಅಷ್ಟೇ ಅಲ್ಲದೇ ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಧೂಳುನಿಂದಾಗಿ ದನಕರುಗಳಿಗೆ ಮೇವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಶಾಸಕರ ಬಳಿ ಅಳಲು ತೋಡಿಕೊಂಡರು.
ಇದೇ ಸಂದರ್ಭದಲ್ಲಿ ತಾಲೂಕು ತಂಡಾಧಿಕಾರಿ ತಿರುಪತಿ ಪಟೇಲ್ ಅವರಿಗೂ ಗಣಿಗಾರಿಕೆಯನ್ನು ನಿಲ್ಲಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ತುಗ್ಗಲಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದರು.
ಇದನ್ನೂ ಓದಿ: Aditya-L1: ಈ ದಿನಾಂಕದಂದು ಮಿಷನ್ ಆದಿತ್ಯ ಎಲ್ 1 ಆರಂಭಿಸಲು ಇಸ್ರೊ ಸಿದ್ಧತೆ
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರಪ್ಪ ಮಾಸ್ಟರ್, ಭರತ್, ರಾಜಪ್ಪ, ಪ್ರಭು, ಬಸವರಾಜಪ್ಪ, ಭರಮಗೌಡ್ರು ಹಾಗೂ ಕೋಮೇಶಪ್ಪ, ರಮೇಶ್ ಕತ್ತಗಿ, ಜಗದೀಶ್ ಕಡದಕಟ್ಟೆ. ಬಸವರಾಜಪ್ಪ, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.