Site icon Vistara News

Metro pillar collapse: ಮೆಟ್ರೋ ಪಿಲ್ಲರ್‌ ಕುಸಿತ: ಐಐಎಸ್‌ಸಿ ತಜ್ಞರ ತಂಡದ ವರದಿ ರೆಡಿ, ದುರಂತಕ್ಕೆ ಎಂಜಿನಿಯರ್‌ ಹೊಣೆ?

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿತ (Metro pillar Collapse) ಪ್ರಕರಣ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಂಡ ತನಿಖೆಯನ್ನು ಮುಗಿಸಿದೆ. ಬಿಎಂಆರ್‌ಸಿಎಲ್‌ಗೆ ಶನಿವಾರ (ಜ.21) ರಂದು 27 ಪುಟಗಳ ವರದಿಯನ್ನು ಸಲ್ಲಿಸಲಿದೆ.

ಕಳೆದ ಜನವರಿ 10ರಂದು ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತವಾಗಿ ತಾಯಿ-ಮಗು ದುರ್ಮರಣ ಹೊಂದಿದ್ದರು. ಘಟನೆಗೆ ನಿಜವಾದ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಬಿಎಂಆರ್‌ಸಿಎಲ್‌ ಮನವಿ ಮಾಡಿತ್ತು. ಇದೀಗ ಐಐಎಸ್‌ಸಿ ಪ್ರೊಫೆಸರ್ ಚಂದ್ರಕಿಶನ್ ಮತ್ತು ತಂಡದವರು ಪರಿಶೀಲನೆ ನಡೆಸಿದ್ದು, 27 ಪುಟಗಳ ವರದಿಯನ್ನು ಬಿಎಂಆರ್‌ಸಿಎಲ್‌ಗೆ ಈ-ಮೇಲ್‌ ಮೂಲಕ ಸಲ್ಲಿಸಲಿದ್ದಾರೆ. ಬಳಿಕ ಸೋಮವಾರ ಬಿಎಂಆರ್‌ಸಿಎಲ್‌ ಎಂಡಿ ಭೇಟಿ ಮಾಡಲಿದ್ದಾರೆ.

ತಜ್ಞರ ತಂಡ

ಘಟನೆ ಏನು?
ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಮೋಟರೋಲಾದಲ್ಲಿ ಇಂಜಿನಿಯರ್‌ ಆಗಿರುವ ತೇಜಸ್ವಿನಿ ಅವರನ್ನು ಪತಿ ಲೋಹಿತ್‌ ಎಂದಿನಂತೆ ಕಚೇರಿಗೆ ಬಿಟ್ಟು ಇಬ್ಬರು ಅವಳಿ ಜವಳಿ ಮಕ್ಕಳನ್ನು ಬೇಬಿ ಸಿಟ್ಟಿಂಗ್‌ ಬಿಡಲು ತೆರಳುತ್ತಿದ್ದರು. ಆದರೆ ಯಮಸ್ವರೂಪಿಯಾಗಿ ಕಾದು ನಿಂತಿದ್ದ ಮೆಟ್ರೋ ಪಿಲ್ಲರ್‌ಗಳು ಏಕಾಏಕಿ ಮರಕ್ಕೆ ಉರುಳಿ, ಆ ಮರವು ಬೈಕ್‌ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ಮಗು ವಿಹಾನ್‌ ಬಲಭಾಗದ ಮೇಲೆ ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದಾಗಿ ಅವರಿಬ್ಬರು ಚಿಕಿತ್ಸೆ ಫಲಿಸದೇ ಜನವರಿ 10ರಂದು ಮೃತಪಟ್ಟಿದ್ದರು.

ತನಿಖಾ ವರದಿಯಲ್ಲಿ ಏನಿದೆ?
-ತನಿಖೆಯನ್ನ ಪ್ರಾರಂಭಿಸುವಾಗ ಕಂಬಿ, ಮರಳು, ಸಿಮೆಂಟ್‌ನ ಕ್ವಾಲಿಟಿ ರಿಪೋರ್ಟ್ ಪಡೆಯಲಾಗಿದೆ.
-ಈ ಪಿಲ್ಲರ್ ನಿರ್ಮಾಣದ ವೇಳೆ 18 ಮೀಟರ್ ಎತ್ತರದ ಕಂಬಿ ಕಟ್ಟಿದ್ದ ಬಿಎಂಆರ್‌ಸಿಎಲ್
-ಈ ಎತ್ತರದಲ್ಲಿ 6 ಪ್ಲೋರ್ ಮನೆ ಕಟ್ಟಬಹುದು, ಅಷ್ಟು ಉದ್ದದ ಕಂಬಿ ಪಿಲ್ಲರ್ ನಿರ್ಮಾಣ ಮಾಡಿದ್ದು ಯಾಕೆ?
-ಇಷ್ಟು ಎತ್ತರದ ಪಿಲ್ಲರ್‌ಗೆ ಕಂಬಿ ಕಟ್ಟಿದಾಗ ಮುಂಜಾಗ್ರತಾ ಕ್ರಮವಾಗಿ ಕಂಬಿಯ ಪಿಲ್ಲರ್‌ಗೆ ಸರಿಯಾದ ಸಪೋರ್ಟ್ ನೀಡಬೇಕಿತ್ತು.
-ಸಪೋರ್ಟ್ ನೀಡದಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
-ಕೆಲಸಗಾರರು ಕಂಬಿಯ ಪಿಲ್ಲರ್‌ನ್ನು ನೇರವಾಗಿ ನಿಲ್ಲಿಸಲು ಸುತ್ತಲು ಸಪೋರ್ಟ್ ನೀಡಬೇಕಿತ್ತು. ಅದು ಕೆಲಸಗಾರರಿಗೆ ತಿಳಿಯುವುದಿಲ್ಲ, ಕಂಟ್ರಾಕ್ಟರ್ ಹಾಗೂ ಇಂಜಿನಿಯರ್‌ಗಳೆ ಅದನ್ನು ನೋಡಿಕೊಳ್ಳಬೇಕು. ಸದ್ಯಕ್ಕೆ ಕಂಟ್ರಾಕ್ಟರ್ ಹಾಗೂ ಇಂಜಿನಿಯರ್‌ಗಳೇ ನೇರ ಹೊಣೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಫೆಬ್ರವರಿ 21ರಂದು ರಾಜ್ಯಾದ್ಯಂತ ಸರ್ಕಾರದಿಂದ ದಾಸೋಹ ದಿನ: ಸಿಎಂ ಬೊಮ್ಮಾಯಿ

Exit mobile version