Site icon Vistara News

Metro Pillar Collapse: ಮೆಟ್ರೋ ಪಿಲ್ಲರ್‌ ಕುಸಿದು ತಾಯಿ-ಮಗು ದುರ್ಮರಣ ಪ್ರಕರಣ; ಸಿದ್ಧವಾಯ್ತು ಚಾರ್ಜ್‌ಶೀಟ್

Metro pillar collapse case, Govindpura police prepares charge sheet

Metro pillar collapse case, Govindpura police prepares charge sheet

ಬೆಂಗಳೂರು: ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತವಾಗಿ (Metro Pillar Collapse) ತಾಯಿ-ಮಗು ದುರ್ಮರಣ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿ, ಒಂಭತ್ತು ಮಂದಿ ವಿರುದ್ಧ ಗೋವಿಂದಪುರ ಪೊಲೀಸರು ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ.

ಕಳೆದ ಜನವರಿ 10ರಂದು ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿತ (Metro pillar Collapse) ಪ್ರಕರಣ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಂಡ ತನಿಖೆಯನ್ನು ಪೂರ್ಣಗೊಳಿಸಿದೆ. ಬಿಎಂಆರ್‌ಸಿಎಲ್‌ಗೆ ಜ.21 ರಂದು 27 ಪುಟಗಳ ವರದಿಯನ್ನು ಸಲ್ಲಿಸಿತ್ತು. 27 ಪುಟಗಳ ವರದಿಯಲ್ಲಿ ಘಟನೆಗೆ ಕಾರಣವಾದ ಅಂಶಗಳು, ನಿರ್ಲಕ್ಷ್ಯ, ಕೈಗೊಳ್ಳಬೇಕಿದ್ದ ಕ್ರಮಗಳು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿತ್ತು.

ಇದೀಗ ಪೊಲೀಸರ ತಂಡವು ತನಿಖೆಯನ್ನು ಪೂರ್ಣಗೊಳಿಸಿ, ಕೆಲವೇ ದಿನಗಳಲ್ಲಿ ಅವಘಡ ಕುರಿತು ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ 9 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಅನ್ನು ಸಿದ್ಧಪಡಿಸಲಾಗಿದೆ. ಸೈಟ್ ಎಂಜಿನಿಯರ್ಸ್, ಮೆಟ್ರೋ ಅಧಿಕಾರಿಗಳು, ಸೈಟ್ ಇನ್‌ಚಾರ್ಜ್‌ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಎಫ್‌ಐಆರ್‌ ಹಾಕಲಾಗಿತ್ತು.

ಹೈದರಾಬಾದ್‌ ಐಐಟಿ ಸಲ್ಲಿಸಿದ್ದ ಎರಡು ವರದಿಗಳು, ಎಫ್ಎಸ್ಎಲ್ ರಿಪೋರ್ಟ್, ತಜ್ಞರ ವರದಿಗಳ ಆಧಾರದ ಮೇಲೆ ಚಾರ್ಜ್‌ಶೀಟ್ ತಯಾರಿ ಆಗಿದೆ. ಮೆಟ್ರೋ ಪಿಲ್ಲರ್ ಕುಸಿತದ ಬಗ್ಗೆ ನ್ಯಾಯಾಲಯಕ್ಕೆ ಗೋವಿಂದಪುರ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದ್ದಾರೆ.

ಇದನ್ನೂ ಓದಿ: 2nd PU Exam 2023: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಶುರು; ಮೇ ಮೊದಲ ವಾರ ಫಲಿತಾಂಶ ಎಂದ ಸಚಿವ ಬಿ.ಸಿ. ನಾಗೇಶ್‌

ಏನಿದು ಘಟನೆ?

ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಮೋಟರೋಲಾದಲ್ಲಿ ಇಂಜಿನಿಯರ್‌ ಆಗಿದ್ದ ತೇಜಸ್ವಿನಿ ಅವರನ್ನು ಪತಿ ಲೋಹಿತ್‌ ಎಂದಿನಂತೆ ಕಚೇರಿಗೆ ಬಿಡಲು ಹಾಗೂ ಇಬ್ಬರು ಅವಳಿ-ಜವಳಿ ಮಕ್ಕಳನ್ನು ಬೇಬಿ ಸಿಟ್ಟಿಂಗ್‌ಗೆ ಬಿಡಲು ಜನವರಿ 10ರಂದು ತೆರಳುತ್ತಿದ್ದರು. ಆದರೆ, ದಾರಿ ಮಧ್ಯೆ ಮೆಟ್ರೋ ಪಿಲ್ಲರ್‌ಗಳು ಏಕಾಏಕಿ ಮರಕ್ಕೆ ಉರುಳಿ, ಆ ಮರವು ಪಿಲ್ಲರ್‌ ಸಹಿತ ಬೈಕ್‌ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ಮಗು ವಿಹಾನ್‌ ಬಲಭಾಗದ ಮೇಲೆ ಬಿದ್ದಿತ್ತು. ತೀವ್ರ ರಕ್ತಸ್ರಾವವಾಗಿದ್ದರಿಂದ ಅವರಿಬ್ಬರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version